ಸರ್ವೇ ಕಾರ್ಯ ಬಳಿಕ ಒತ್ತುವರಿ ತೆರವು ಮಾಡಿ

ಮಂಗಲ ಸಮೀಪದ ಹುಲುಸುಗುಡ್ಡೆ ಬಳಿಯ ರಸ್ತೆಯನ್ನು ಶಾಸಕ ಎಂ.ಆರ್ ಮಂಜುನಾಥ್ ಪರಿಶೀಲಿಸಿದರು. ಕೆ.ಎನ್.ಚೈತ್ರಾ, ಸಿಂಗಾರಶೆಟ್ಟಿ, ಮಹದೇವಸ್ವಾಮಿ ಇತರರು ಇದ್ದರು.
ಮಂಗಲ ಸಮೀಪದ ಹುಲುಸುಗುಡ್ಡೆ ಬಳಿಯ ರಸ್ತೆಯನ್ನು ಶಾಸಕ ಎಂ.ಆರ್ ಮಂಜುನಾಥ್ ಪರಿಶೀಲಿಸಿದರು. ಕೆ.ಎನ್.ಚೈತ್ರಾ, ಸಿಂಗಾರಶೆಟ್ಟಿ, ಮಹದೇವಸ್ವಾಮಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಕೆ.ಎನ್.ಚೈತ್ರಾಗೆ ಶಾಸಕ ಎಂ.ಆರ್ ಮಂಜುನಾಥ್ ಸೂಚನೆ
ಹನೂರು: ಓಡಾಡಕ್ಕೆ ಅನುಕೂಲವಾಗುವಂತೆ ರೈತರ ಸಹಕಾರ ಪಡೆದು ಸರ್ವೇ ಕಾರ್ಯ ನಡೆಸಿ ಎಂದು ಶಾಸಕ ಎಂ.ಆರ್ ಮಂಜುನಾಥ್ ತಹಸೀಲ್ದಾರ್ ಕೆ.ಎನ್.ಚೈತ್ರಾ ಅವರಿಗೆ ಸೂಚಿಸಿದರು.
ತಾಲೂಕಿನ ಹುಲುಸುಗುಡ್ಡೆ ಸಮೀಪದ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನೀಲಿನಕ್ಷೆಯೊಂದಿಗೆ ಶನಿವಾರ ಪರಿಶೀಲಿಸಿದ ಬಳಿಕ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು. ಓಡಾಡಲು ಸಮರ್ಪಕ ರಸ್ತೆ ಇಲ್ಲದ ಪರಿಣಾಮ ಈ ಭಾಗದಲ್ಲಿನ ರೈತರು ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಸರ್ವೇ ಕಾರ್ಯ ನಡೆಸಿ ಒತ್ತುವರಿ ಜಾಗವನ್ನು ತೆರೆವುಗೊಳಿಸಬೇಕು. ಜತೆಗೆ ರೈತರ ಸಹಕಾರ ಪಡೆದು ತಿರುಗಾಡಲು ದಾರಿಯನ್ನು ಬಿಡಿಸಲು ಅಗತ್ಯ ಕ್ರಮ ವಹಿಸಬೇಕು. ಆ ಮೂಲಕ ಅನುಕೂಲ ಕಲ್ಪಿಸುವಂತೆ ಸೂಚಿಸಿದರು. ಇದಕ್ಕೆ ತಹಸೀಲ್ದಾರ್,ಅಗತ್ಯ ಕ್ರಮವಹಿಸುವುದಾಗಿ ತಿಳಿಸಿದರು.
ಇದೇ ವೇಳೆ ಸ್ಥಳೀಯ ರೈತರಿಂದ ಮಾಹಿತಿ ಪಡೆದ ಶಾಸಕರು, ಓಡಾಡುವ ರಸ್ತೆಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಅಗತ್ಯ ಸೌಕರ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು. ಈ ಸಂಬಂಧ ಅಧಿಕಾರಿಗಳಿಗೆ ಅಗತ್ಯ ಸೂಚನೆಯನ್ನೂ ನೀಡಿದರು.
ತಾಲೂಕು ಸರ್ವೇಯರ್ ಸಿಂಗಾರಶೆಟ್ಟಿ, ಆರ್‌ಐ ಮಹದೇವಸ್ವಾಮಿ, ಗ್ರಾಮ ಆಡಳಿತ ಅಧಿಕಾರಿ ಪುನೀತ್, ರೈತ ಮುಖಂಡರಾದ ನಾಗೇಂದ್ರ, ಮಹದೇವ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net