ಕೆಲ್ಲಂಬಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಚಾಮರಾಜನಗರ ತಾಲೂಕಿನ ಕೆಲ್ಲಂಬಳ್ಳಿ ಗ್ರಾಮದಲ್ಲಿ ಕೆನರಾ ಬ್ಯಾಂಕ್‌ನ ಸಿಎಸ್‌ಆರ್ ಅನದಾನದಲ್ಲಿ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಬ್ಯಾಂಕ್ ಎಜಿಎಂ ಪಿ.ಎಸ್.ಉಮೇಶ್ ಬುಧವಾರ ಉದ್ಘಾಟಿಸಿದರು. ಸೋಮು, ಸುಮಿತ್ರಾ, ರಂಗಸ್ವಾಮಿ, ರಾಜೇಶ್ ಇತರರಿದ್ದರು.
ಚಾಮರಾಜನಗರ ತಾಲೂಕಿನ ಕೆಲ್ಲಂಬಳ್ಳಿ ಗ್ರಾಮದಲ್ಲಿ ಕೆನರಾ ಬ್ಯಾಂಕ್‌ನ ಸಿಎಸ್‌ಆರ್ ಅನದಾನದಲ್ಲಿ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಬ್ಯಾಂಕ್ ಎಜಿಎಂ ಪಿ.ಎಸ್.ಉಮೇಶ್ ಬುಧವಾರ ಉದ್ಘಾಟಿಸಿದರು. ಸೋಮು, ಸುಮಿತ್ರಾ, ರಂಗಸ್ವಾಮಿ, ರಾಜೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆನರಾ ಬ್ಯಾಂಕ್ ಸಿಎಸ್‌ಆರ್ ನಿರ್ಮಾಣ
  • ಕೆಲ್ಲಂಬಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ
ಚಾಮರಾಜನಗರ: ತಾಲೂಕಿನ ಕೆಲ್ಲಂಬಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೆನರಾ ಬ್ಯಾಂಕ್ ಎಜಿಎಂ ಪಿ.ಎಸ್.ಉಮೇಶ್ ಬುಧವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಿಗೆ ಮೂಲಸೌಕರ್ಯ ಕಲ್ಪಿಸಬೇಕೆಂಬ ಉದ್ದೇಶದಿಂದ ಕೆನರಾ ಬ್ಯಾಂಕ್‌ನ ಸಿಎಸ್‌ಆರ್ ಅನುದಾನದ 10 ಲಕ್ಷ ರೂ.ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ. ಗ್ರಾಮಸ್ಥರು ಇದನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆಲ್ಲಂಬಳ್ಳಿ ಸೋಮ ಮಾತನಾಡಿ, ಕೆನರಾ ಬ್ಯಾಂಕ್‌ನ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸಿ, ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಿಕೊಟ್ಟಿರುವುದು ಸಂತಸ ತಂದಿದೆ ಎಂದರು. ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್‌ನ ಮೈಸೂರು ಪ್ರಾಂತಿಯ ಕಚೇರಿ ವಿಭಾಗದ ವ್ಯವಸ್ಥಾಪಕ ಬಿ.ಎಸ್.ಲೋಹಿತ್, ಚಾ.ನಗರ ಶಾಖೆಯ ವ್ಯವಸ್ಥಾಪಕ ಪ್ರಕಾಶ್ ಕುಂಬರಕರ್, ಗುಮಾಸ್ತ ಕುಮಾರ್, ಕೆಲ್ಲಂಬಳ್ಳಿ ಗ್ರಾ.ಪಂ. ಮಾಜಿ ಸದಸ್ಯರಾದ ರಂಗಸ್ವಾಮಿ, ರಾಜೇಶ್, ದೊಡ್ಡಯ್ಯ, ಗೌಡಿಕೆ ಮಲ್ಲಿಕಾರ್ಜುನಪ್ಪ, ಪ್ರಕಾಶ್, ಎಸ್‌ಡಿಎಂಸಿ ಅಧ್ಯಕ್ಷ ದೊರೆಸ್ವಾಮಿ, ಮಹದೇವಯ್ಯ, ನಾರಾಯಣ ನಾಯಕ್, ಮಹೇಶ್, ನಂಜುಂಡಸ್ವಾಮಿ, ಸುಮಿತ್ರಾ, ಬಸವಗೌಡ, ನೀರುಗಂಟಿ ನಾಗೇಶ್ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net