ಕ್ಯಾಥೊಲಿಕ್ ಅಸೋಸಿಯೇಷನ್ ಆಫ್ ಚಾಮರಾಜನಗರ ನಗರದ ಅಧ್ಯಕ್ಷ ಡಿ.ಜಿ.ಡೇವಿಡ್ ಮಾತನಾಡಿ, ಪಂದ್ಯಾವಳಿಯಲ್ಲಿ ಜಿಲ್ಲೆಯಿಂದ ಸುಮಾರು 16 ತಂಡಗಳು ಭಾಗವಹಿಸಿವೆ. ಪಂದ್ಯಾವಳಿ ಫೈನಲ್ ವಿಜೇತ ತಂಡಕ್ಕೆ 15 ಸಾವಿರ ರೂ.ಮತ್ತು ಟ್ರೋಫಿ, ಸೋತ ತಂಡಕ್ಕೆ 10 ಸಾವಿರ ರೂ.ಮತ್ತು ಟ್ರೋಫಿ ಹಾಗೂ ಪ್ರತಿ ಪಂದ್ಯದಲ್ಲೂ ಮ್ಯಾನ್ ಆಫ್ ದಿ ಮ್ಯಾಚ್ ಹಾಗೂ ಮ್ಯಾನ್ ಆಫ್ ದಿ ಸಿರಿಯಸ್ ಮತ್ತು ಬೆಸ್ಟ್ ಬೋಲರ್, ಬೆಸ್ಟ್ ಬ್ಯಾಟ್‌ಮ್ಯಾನ್ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.