ತೇರಂಬಳ್ಳಿ, ಗೊಬ್ಬಳ್ಳಿಪುರಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿ

ಕೊಳ್ಳೇಗಾಲ ತಾಲೂಕಿನ ತೇರಂಬಳ್ಳಿ ಮತ್ತು ಗೊಬ್ಬಳ್ಳಿಪುರ ಗ್ರಾಮಕ್ಕೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಶುಕ್ರವಾರ ಕೊಳ್ಳೇಗಾಲ ಕೆಎಸ್‌ಆರ್‌ಟಿಸಿ ಘಟಕ ನಿಯಂತ್ರಣಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.ವೇದಿಕೆ ಜಿಲ್ಲಾಧ್ಯಕ್ಷ ಸುಂದರ್, ಸಂಚಾಲಕ ಮೂರ್ತಿ, ತಾಲೂಕು ಕಾರ್ಯದರ್ಶಿ ಉಮೇಶ್ ಇತರರು ಇದ್ದರು.

Published on
ಕೊಳ್ಳೇಗಾಲ : ತಾಲೂಕಿನ ತೇರಂಬಳ್ಳಿ ಮತ್ತು ಗೊಬ್ಬಳ್ಳಿಪುರ ಗ್ರಾಮಕ್ಕೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಶುಕ್ರವಾರ ಕೆಎಸ್‌ಆರ್‌ಟಿಸಿ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಿದರು.
ಕೊಳ್ಳೇಗಾಲ ತಾಲೂಕಿನ ಗೊಬ್ಬಳಿಪುರ ಮತ್ತು ತೇರಂಬಳ್ಳಿ ಗ್ರಾಮಗಳು ಕುಗ್ರಾಮಗಳಾಗಿವೆ. ಈ ಗ್ರಾಮಗಳ ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ತೆರಳಲು, ಕೂಲಿ ಕಾರ್ಮಿಕರು, ಸಾರ್ವಜನಿಕರು ಕೊಳ್ಳೇಗಾಲ ಪಟ್ಟಣಕ್ಕೆ ಬರಲು ಸಾರಿಗೆ ಬಸ್ ವ್ಯವಸ್ಥೆ ತುರ್ತಾಗಿ ಬೇಕಾಗಿದೆ. ಕೊಳ್ಳೇಗಾಲ ಪಟ್ಟಣಕ್ಕೆ ಬರಬೇಕೆಂದರೆ ಗ್ರಾಮದಿಂದ 3 ಕಿ.ಮೀ. ದೂರವಿರುವ ಮುಖ್ಯ ರಸ್ತೆಗೆ ನಡೆದುಕೊಂಡೇ ಸಾಗಬೇಕಾದ ಪರಿಸ್ಥಿತಿ ಇದೆ. ಹಾಗಾಗಿ ಕೂಲಿ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ದಿನಕ್ಕೆ ಎರಡು ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ಸಂಘಟನೆ ಮುಖಂಡರು ಮನವಿ ಮಾಡಿದರು. ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸುಂದರ್, ಜಿಲ್ಲಾ ಸಂಚಾಲಕ ಮೂರ್ತಿ, ಕೊಳ್ಳೇಗಾಲ ತಾಲೂಕು ಕಾರ್ಯದರ್ಶಿ ಉಮೇಶ್, ಕೊಳ್ಳೇಗಾಲ ನಗರ ಘಟಕದ ಅಧ್ಯಕ್ಷ ಪೂರ್ವಿತ್, ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ರಾಜಣ್ಣ ಮತ್ತಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net