ಬರಹಗಾರ ಲಕ್ಷ್ಮಿನರಸಿಂಹ ಮಾತನಾಡಿ, ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದ ಸಿದ್ಧಲಿಂಗಯ್ಯನವರು ಸರಸ್ವತಿಯ ಪುತ್ರರು. ಪ್ರಾಧ್ಯಾಪಕರಾಗಿ ಅಪಾರ ಶಿಷ್ಯರನ್ನು ಹೊಂದಿದ್ದ ಸಿದ್ಧಲಿಂಗಯ್ಯನವರು ನಾಡಿನ ಎಲ್ಲಡೆ ಅಭಿಮಾನದ ಸಾಹಿತ್ಯದ ಓದುಗರನ್ನು ಸೃಷ್ಟಿಸಿದರು ಎಂದರು. ಕಾರ್ಯಕ್ರಮದಲ್ಲಿ ರವಿಚಂದ್ರಪ್ರಸಾದ್ ಕಹಳೆ ಹಾಗೂ ಶಿವಲಿಂಗಮೂರ್ತಿ ಗೀತಾ ಗಾಯನವನ್ನು ನಡೆಸಿಕೊಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನ ಬಿ.ಕೆ ಆರಾಧ್ಯ, ಪದ್ಮ ಪುರುಷೋತ್ತಮ್, ನಿವೃತ್ತ ಶಿಕ್ಷಕಿ ಸರಸ್ವತಿ, ಮನೋಜ್, ಕಿರಣ್ ಆದಿತ್ಯ, ಪ್ರಕಾಶ್, ಮಂಜುನಾಥ ಇತರರು ಇದ್ದರು.