ಗುಂಡ್ಲುಪೇಟೆ: ಮಹಿಳೆಯ ಚಿನ್ನದ ಸರ ಅಪಹರಿಸಿದ್ದ ಇಬ್ಬರನ್ನು ಪಟ್ಟಣದ ಪೊಲೀಸರು ಮಾಲು ಸಮೇತ ಬಂಧಿಸಿ ಎರಡು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ತಮಿಳುನಾಡು ಮೂಲದ ವಾಂಜಿನಾಥನ್ ಹಾಗೂ ಪ್ರಭಾಕರನ್ ಬಂಧಿತರು. ಇವರು ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಎದುರು ರಸ್ತೆಯಲ್ಲಿ ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ಆರೋಪಿಗಳು ಶನಿವಾರ ಸಂಜೆ ವಾಯುವಿಹಾರ ಮುಗಿಸಿ ಮನೆಗೆ ಹೋಗುತ್ತಿದ್ದ ಭಾರತಿ ಎಂಬುವರ ಕುತ್ತಿಗೆಯಲ್ಲಿದ್ದ 40 ಗ್ರಾಂ ಚಿನ್ನದ ಸರ ಅಪಹರಿಸಿ ಪರಾಯಾಗಿದ್ದರು.
ವಿಷಯ ತಿಳಿದ ಕೂಡಲೇ ಎಸ್‌ಪಿ ಮುತ್ತುರಾಜ್ ಮಾರ್ಗದರ್ಶನದಲ್ಲಿ ಪಟ್ಟಣದ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಜಯಕಯಮಾರ್, ತೆರಕಣಾಂಬಿ ಠಾಣೆಯ ಪಿಎಸ್‌ಐ ಮಹೇಶ್ ಹಾಗೂ ಸಂತೆಮರಹಳ್ಳಿ ಠಾಣೆಯ ಸರ್ಕಲ್ ಇನ್‌ಸ್ಪೆೆಕ್ಟರ್ ಸಾಗರ್ ನೇತೃತ್ವದಲ್ಲಿ ಪೊಲೀಸರು ಎರಡು ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿದರು.
ನಂಜನಗೂಡಿನಲ್ಲಿದ್ದ ಈ ಇಬ್ಬರು ಆರೋಪಿಗಳನ್ನು ಅಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಕಳ್ಳತನ ಮಾಡಿದ್ದ ಎರಡು ಬೈಕ್‌ಗಳು ಹಾಗೂ ಚಿನ್ನದ ಸರದೊಂದಿಗೆ ಬಂಧಿಸಿ, 8 ಲಕ್ಷ ಬೆಲೆಬಾಳುವ ಚಿನ್ನಾಭರಣ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಇವರು ಹಿಂದೆ ಮೊಬೈಲ್, ಮನೆಗಳ್ಳತನ ಹಾಗೂ ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಪುಟ್ಟರಾಜು, ಶಿವರಾಜ್, ಕಿಶೋರ್, ಬಂಟಪ್ಪ, ಮಹೇಶ್, ನಟೇಶ ಇತರರು ಭಾಗವಹಿಸಿದ್ದರು.