ಕೋರೆಗಾಂವ್ ವಿಜಯೋತ್ಸವ ಆಚರಣೆ

ಹನೂರಿನಲ್ಲಿ ದಸಂಸ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕೋರೆಗಾಂವ್ ವಿಜಯೋತ್ಸವವನ್ನು ಕೇಕ್ ಕತ್ತರಿಸುವುದು ಮೂಲಕ ಆಚರಿಸಿದರು. ಸಿದ್ದರಾಜು, ಮಹೇಶ್, ಹಿಂಡಯ್ಯ ಇತರರು ಇದ್ದರು.
ಹನೂರಿನಲ್ಲಿ ದಸಂಸ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕೋರೆಗಾಂವ್ ವಿಜಯೋತ್ಸವವನ್ನು ಕೇಕ್ ಕತ್ತರಿಸುವುದು ಮೂಲಕ ಆಚರಿಸಿದರು. ಸಿದ್ದರಾಜು, ಮಹೇಶ್, ಹಿಂಡಯ್ಯ ಇತರರು ಇದ್ದರು.
Published on
ಹನೂರು: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಗುರುವಾರ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕೇಕ್ ಕತ್ತರಿಸುವ ಮೂಲಕ ಕೋರೆಗಾಂವ್ ವಿಜಯೋತ್ಸವ ಆಚರಿಸಿದರು.
ದಸಂಸ ರಾಜ್ಯ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ಮಾತನಾಡಿ, ಕೋರೆಗಾಂವ್ ವಿಜಯವು ಶೋಷಿತರ ಹೋರಾಟದ ಸಂಕೇತವಾಗಿದೆ. ಡಾ. ಬಿ.ಆರ್.ಅಂಬೇಡ್ಕರ್ ಅವರ ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಕನಸನ್ನು ಮುಂದುವರಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಇದರಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲುದಾರರಾಗಬೇಕು ಎಂದು ತಿಳಿಸಿದರು.
ದಸಂಸ ತಾಲೂಕು ಸಂಚಾಲಕ ಭೈರನತ್ತ ಮಹೇಶ್, ಪದಾಧಿಕಾರಿಗಳಾದ ಹಿಂಡಯ್ಯ, ಮುರುಗೇಶ್, ನಾಗರಾಜು, ಪ್ರೇಮ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net