ಚೆೆಂಡುಮಲ್ಲಿಗೆ ಸಂಸ್ಕರಣಾ ಕಾರ್ಖಾನೆ ಬಂದ್‌ಗೆ ಆಗ್ರಹ

ಗುಂಡ್ಲುಪೇಟೆ ತಾಲೂಕಿನ ಸ್ಕಂದಗಿರಿ ಪಾರ್ವತಾಂಭಾ ದೇವಾಲಯದಲ್ಲಿ ರೈತರ ಆಯೋಜಿಸಲಾಗಿತ್ತು.
ಗುಂಡ್ಲುಪೇಟೆ ತಾಲೂಕಿನ ಸ್ಕಂದಗಿರಿ ಪಾರ್ವತಾಂಭಾ ದೇವಾಲಯದಲ್ಲಿ ರೈತರ ಆಯೋಜಿಸಲಾಗಿತ್ತು.
Published on
ಗುಂಡ್ಲುಪೇಟೆ: ತಾಲೂಕಿನ ಕಗ್ಗಳದಹುಂಡಿ ಸಮೀಪ ಇರುವ ಚೀನಾ ಮೂಲದ ಚೆಂಡುಮಲ್ಲಿಗೆ ಸಂಸ್ಕರಣಾ ಘಟಕದಿಂದ ಹೊರಬರುತ್ತಿರುವ ದುರ್ವಾಸನೆಯಿಂದ ರೊಚ್ಚಿಗೆದ್ದ ಸುತ್ತಮುತ್ತಲಿನ ಗ್ರಾಮಸ್ಥರು ರೈತ ಸಂಘದ ಜತೆಗೂಡಿ ಕಾರ್ಖಾನೆ ಬಂದ್ ಮಾಡಿಸಲು ಹೋರಾಟ ಕೈಗೆತ್ತಿಕೊಂಡಿದ್ದಾರೆ.
ಇತ್ತೀಚೆಗೆ ಕಾರ್ಖಾನೆಯು ಪರಿಸರ ಇಲಾಖೆಯ ಯಾವುದೇ ಮಾನದಂಡಗಳನ್ನು ಅನುಸರಿಸದ ಪರಿಣಾಮ ರಾತ್ರಿ ವೇಳೆ ದುರ್ವಾಸನೆ ಬೀರುತ್ತಿರುವುದರಿಂದ ಬೇಸತ್ತ ಸಾರ್ವಜನಿಕರು ಸಂಘಟಿತ ಹೋರಾಟಕ್ಕೆ ಮುಂದಾಗಿದ್ದಾರೆ.
ಈ ಅಂಗವಾಗಿ ಕಾರ್ಖಾನೆ ಸುತ್ತಮುತ್ತಲಿನ ಶಿಂಡನಪುರ, ಕಂದೇಗಾಲ, ಕಗ್ಗಳದಹುಂಡಿ, ಮೊಳ್ಳಯ್ಯನಹುಂಡಿ, ಬೆಟ್ಟಹಳ್ಳಿ, ಹೊಸೂರು, ದೊಡ್ಡತುಪ್ಪೂರು ಹಾಗೂ ಚಿಕ್ಕತುಪ್ಪೂರು ಗ್ರಾಮಗಳ ಜನರು ಸಾಮೂಹಿಕ ರೈತ ಸಂಘದ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಮಂಗಳವಾರ ತಾಲೂಕಿನ ಸ್ಕಂದಗಿರಿ ಪಾರ್ವತಾಂಬ ದೇವಾಲಯದಲ್ಲಿ ಸಭೆ ನಡೆಸಿದರು.
ಗುರುವಾರ ಎಲ್ಲ ಗ್ರಾಮಗಳ ಸುಮಾರು 500 ಯುವಕರು ಕಾರ್ಖಾನೆ ಸಮೀಪ ಸಮಾವೇಶಗೊಂಡು ಬೈಕ್ ರ‌್ಯಾಲಿ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಪರಿಸರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಮಾರಕವಾದ ಕಾರ್ಖಾನೆ ಬಂದ್ ಮಾಡುವಂತೆ ಮನವಿ ಸಲ್ಲಿಸಲಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಸರಿಯಾದ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಶಿಂಡನಪುರ ಗ್ರಾಮ ಪಂಚಾಯಿತಿ ಸದಸ್ಯ ಎಸ್.ಟಿ.ಮಹದೇವಸ್ವಾಮಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net