ಬೆಂಕಿ ತಗುಲಿ ವೃದ್ಧನಿಗೆ ಗಾಯ

ಪಡಸಲನತ್ತ ಗ್ರಾಮದಲ್ಲಿ  ಬೆಂಕಿ ತಗುಲಿ ಗಾಯಗೊಂಡ ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಡಸಲನತ್ತ ಗ್ರಾಮದಲ್ಲಿ ಬೆಂಕಿ ತಗುಲಿ ಗಾಯಗೊಂಡ ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Published on
ಹನೂರು: ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಸಮೀಪದ ಪಡಸಲನತ್ತ ಗ್ರಾಮದಲ್ಲಿ ಬುಧವಾರ ಬೆಂಕಿ ತಗುಲಿ ವೃದ್ಧರೊಬ್ಬರು ಗಾಯಗೊಂಡಿದ್ದಾರೆ.
ಗ್ರಾಮದ ಪುಟ್ಟತಂಬಡಿ(84) ಗಾಯಗೊಂಡವರು. ಬೆಳಗಿನ ಜಾವ ವಿಪರೀತ ಚಳಿಗೆ ಮೈ ಬೆಚ್ಚನೆ ಮಾಡಿಕೊಳ್ಳಲು ಮನೆ ಸಮೀಪದಲ್ಲಿ ಬೆಂಕಿ ಹಾಕಿಕೊಂಡು ಬೆಚ್ಚನೆ ಮಾಡಿಕೊಳ್ಳುತ್ತಿದ್ದರು. ಆದರೆ ಅವರು ಹೊದ್ದಿದ್ದ ಹೊದಿಕೆಗೆ ಬೆಂಕಿ ತಗುಲಿದೆ. ಪರಿಣಾಮ ದೇಹ ಹಾಗೂ ಮುಖದ ಭಾಗಕ್ಕೆ ಸುಟ್ಟ ಗಾಯವಾಗಿದೆ. ಇದರಿಂದ ಅಸ್ವಸ್ಥಗೊಂಡ ಅವರನ್ನು ಕುಟುಂಬಸ್ಥರು ತಮಿಳುನಾಡಿನ ಮೆಟ್ಟೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹದೇಶ್ವರ ಬೆಟ್ಟ ಪೊಲೀಸರು ಗಾಯಾಳುವಿನಿಂದ ಹೇಳಿಕೆ ಪಡೆದಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net