ಕೆ. ವೆಂಕಟೇಶ್, ಸುನೀಲ್ ಬೋಸ್‌ರನ್ನು ಹುಡುಕಿ ಕೊಡಿ

 ಸಚಿವ ಕೆ. ವೆಂಕಟೇಶ್ ಹಾಗೂ ಸಂಸದ ಸುನೀಲ್‌ಬೋಸ್ ಅವರನ್ನು ಹುಡುಕಿ ಧರಣಿ ಸ್ಥಳಕ್ಕೆ ಕರೆ ತರುವಂತೆ ವಡಕೆಹಳ್ಳದಲ್ಲಿ ಆಹೋ ರಾತ್ರಿ ಧರಣಿ ಕೈಗೊಂಡಿರುವ ರೈತರು ರಾಮಾಪುರ ಪೊಲೀಸ್ ಠಾಣೆಗೆ ಆಗಮಿಸಿ ಮನವಿ ಸಲ್ಲಿಸಿದರು. ಶೈಲೇಂದ್ರ, ಅರ್ಪುದರಾಜ್, ಲೂರ್ದುಸ್ವಾಮಿ ಮತ್ತಿತರರಿದ್ದರು.

Published on
ಹನೂರು: ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಹಾಗೂ ಸಂಸದ ಸುನೀಲ್ ಬೋಸ್ ಅವರನ್ನು ಹುಡುಕಿ ಧರಣಿ ನಿರತ ಸ್ಥಳಕ್ಕೆ ಕರೆ ತರುವಂತೆ ಮಂಗಳವಾರ ತಾಲೂಕಿನ ವಡಕೆಹಳ್ಳದಲ್ಲಿ ಕಳೆದ 37 ದಿನಗಳಿಂದ ಅಹೋ ರಾತ್ರಿ ಧರಣಿ ನಡೆಸುತ್ತಿರುವ ರೈತರು ರಾಮಾಪುರ ಠಾಣೆಗೆ ಆಗಮಿಸಿ ಮನವಿ ಸಲ್ಲಿಸಿದರು.
ರೈತರು ಮಾತನಾಡಿ, ಏತ ನೀರಾವರಿ ಯೋಜನೆಯನ್ನು ರೂಪಿಸಿಸುವಂತೆ ಆಗ್ರಹಿಸಿ 37 ದಿನಗಳಿಂದ ವಡಕೆಹಳ್ಳದಲ್ಲಿ ಆಹೋರಾತ್ರಿ ಧರಣಿ ಕೈಗೊಂಡಿದ್ದೇವೆ. ಆದರೆ ಈವರೆಗೂ ಬಗೆಹರಿದಿಲ್ಲ. ಸಂಸದ ಸುನೀಲ್ ಬೋಸ್ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ಆದರೆ ನಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ. ಆದ್ದರಿಂದ ಇವರನ್ನು ಹುಡುಕಿ ಆಹೋ ರಾತ್ರಿ ಧರಣಿ ಸ್ಥಳಕ್ಕೆ ಕರೆ ತರುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ, ಮಾರ್ಟಳ್ಳಿ ಗ್ರಾಮ ಘಟಕದ ಅಧ್ಯಕ್ಷ ಅರ್ಪುದರಾಜ್, ಕಾರ್ಯದರ್ಶಿ ಲೂರ್ದುಸ್ವಾಮಿ, ಪುಟ್ಟರಾಜು, ಸೂಸೈರಾಜ್, ಜೋಸೆಫ್ ಹಾಗೂ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net