ಸುತ್ತೂರು ಶ್ರೀ ಕ್ಷೇತ್ರದಲ್ಲಿ ಜಗದ್ಗುರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಸಂಸ್ಮರಣೆ ಪ್ರಯುಕ್ತ ಆಯೋಜಿಸಿದ್ದ ಜೆಎಸ್‌ಎಸ್ ಅಂತರ ಸಂಸ್ಥೆಗಳ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಯಲ್ಲಿ ವಿಜೇತರಾದ ಪಟ್ಟಣದ ಜೆಎಸ್‌ಎಸ್ ಕಾಲೇಜು ವಿದ್ಯಾರ್ಥಿನಿಯರಿಗೆ ಕಾಲೇಜಿನ ಆಡಳಿತ ಮಂಡಳಿ ಮತ್ತು ಅಧ್ಯಾಪಕರಿಂದ ಶನಿವಾರ ಅಭಿನಂದಿಸಲಾಯಿತು. ಕೊಂಗಳಪ್ಪ, ಗಿರೀಶ್, ವಾಣಿ, ಸ್ನೇಹಾ ಇತರರು ಇದ್ದರು.
ಕೊಳ್ಳೇಗಾಲ:ಸುತ್ತೂರು ಶ್ರೀ ಕ್ಷೇತ್ರದಲ್ಲಿ ನ.24 ರಿಂದ 27ರವರೆಗೆ ಜಗದ್ಗುರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಸಂಸ್ಮರಣೆ ಪ್ರಯುಕ್ತ ಏರ್ಪಡಿಸಿದ್ದ ಜೆಎಸ್‌ಎಸ್ ಅಂತರಸಂಸ್ಥೆಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಪಟ್ಟಣದ ಜೆಎಸ್‌ಎಸ್ ಕಾಲೇಜು ವಿದ್ಯಾರ್ಥಿನಿಯರಿಗೆ ಕಾಲೇಜಿನ ಆಡಳಿತ ಮಂಡಳಿ ಮತ್ತು ಅಧ್ಯಾಪಕ ವೃಂದ ಶನಿವಾರ ಅಭಿನಂದಿಸಿದ್ದಾರೆ.
ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬಿ.ಎಂ.ಅನು, ಡಿ.ದಿವ್ಯಾ, ಎನ್.ಮಹದೇವಿ, ಎಂ.ಸ್ಪಂದನಾ, ಎಂ.ಕೆ.ಪೂಜಾ, ಎಂ.ಅಪೂರ್ವ, ಡಿ.ಸ್ಫೂರ್ತಿ, ಎನ್.ಅಮೃತಾ, ಆರ್.ರೀತು ನಾಯಕ್, ಟಿ.ಎಸ್.ಸಿಂಚನಾ ಉತ್ತಮ ಪ್ರದರ್ಶನ ನೀಡಿ, ಸತತ ನಾಲ್ಕನೆಯ ಬಾರಿಗೆ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.
ವಿದ್ಯಾರ್ಥಿನಿ ಟಿ.ಎಸ್.ಸಿಂಚನಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು 4 ಸಾವಿರ ರೂ. ನಗದು ಬಹುಮಾನ ಪಡೆದಿದ್ದಾರೆ. ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಎಂ.ಕೆ.ಪೂಜಾ ದ್ವಿತೀಯ ಸ್ಥಾನಗಳಿಸಿದ್ದಾರೆ. ವಿಜೇತರಾಗಿ ಕಾಲೇಜಿಗೆ ಕೀರ್ತಿ ತಂದ ಜೆಎಸ್‌ಎಸ್ ಮಹಿಳಾ ಕಾಲೇಜು ಪ್ರಾಂಶುಪಾಲ ಕೊಂಗಳಪ್ಪ, ಸಹಾಯಕ ಆಡಳಿತ ಅಧಿಕಾರಿ ಗಿರೀಶ್, ಅಧ್ಯಾಪಕರಾದ ವಾಣಿ, ಸ್ನೇಹಾ, ನಂದಿನಿ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀಧರ್ ಗೌರವಿಸಿ ಅಭಿನಂದಿಸಿದ್ದಾರೆ.