ಹುಲಿ ದಾಳಿಗೆ ಹಸುವಿಗೆ ಗಾಯ

ಗುಂಡ್ಲುಪೇಟೆ ತಾಲೂಕಿನ ಕಲ್ಲುಕಟ್ಟೆ ಹಳ್ಳ ಜಲಾಶಯದ ಬಳಿ ಹುಲಿ ದಾಳಿ ನಡೆಸಿದ ಪರಿಣಾಮ ಗಾಯಗೊಂಡ ಹಸುವನ್ನು ಸಾರ್ವಜನಿಕರು ವೀಕ್ಷಿಸಿದರು.
ಗುಂಡ್ಲುಪೇಟೆ ತಾಲೂಕಿನ ಕಲ್ಲುಕಟ್ಟೆ ಹಳ್ಳ ಜಲಾಶಯದ ಬಳಿ ಹುಲಿ ದಾಳಿ ನಡೆಸಿದ ಪರಿಣಾಮ ಗಾಯಗೊಂಡ ಹಸುವನ್ನು ಸಾರ್ವಜನಿಕರು ವೀಕ್ಷಿಸಿದರು.
Published on
ಗುಂಡ್ಲುಪೇಟೆ: ತಾಲೂಕಿನ ಕಲ್ಲುಕಟ್ಟೆ ಹಳ್ಳ ಜಲಾಶಯದ ಬಳಿ ಹುಲಿ ದಾಳಿ ನಡೆಸಿ ಹಸುವನ್ನು ಗಾಯಗೊಳಿಸಿದೆ.
ಹುಲ್ಲೇಪುರ ಗ್ರಾಮದ ಸ್ವಾಮಿ ಎಂಬುವರ ಜಮೀನಿನಲ್ಲಿ ಮೇಯುತ್ತಿದ್ದ ಹಸುಗಳ ಮೇಲೆ ಬುಧವಾರ ಮಧ್ಯಾಹ್ನ ಹುಲಿ ದಾಳಿ ನಡೆಸಿದೆ. ಹುಲಿ ಎರಗಿದ ಬಿರುಸಿಗೆ ಬೆದರಿದ ಹಸು ತಪ್ಪಿಸಿಕೊಳ್ಳಲು ಜೋರಾಗಿ ಓಡಿದ್ದರಿಂದ ಕಾಲಿಗೆ ತೀವ್ರವಾಗಿ ಗಾಯವಾಗಿದೆ. ಹುಲಿಯನ್ನು ಕಂಡ ಅಕ್ಕಪಕ್ಕದ ಜಮೀನುಗಳಲ್ಲಿದ್ದ ರೈತರು ಜೋರಾಗಿ ಕೂಗುತ್ತಿದ್ದಂತೆ ಹುಲಿ ಓಡಿ ಹೋಗಿದೆ. ಇದರಿಂದ ಈ ಭಾಗದ ರೈತರು ಆತಂಕಕ್ಕೊಳಗಾಗಿದ್ದಾರೆ. ಕೂಡಲೇ ಹುಲಿಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಫರ್ ವಲಯ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಹುಲಿ ಪತ್ತೆಗೆ ಕ್ಯಾಮರಾ ಅಳವಡಿಸಿ ಕೂಂಬಿಂಗ್ ಮಾಡಲಾಗುವುದು ಎಂದು ಪ್ರಭಾರ ವಲಯಾರಣ್ಯಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net