ಈ ವೇಳೆ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಪ್ರಾಧಿಕಾರದಿಂದ ಪ್ರತಿ ವರ್ಷವೂ ಹೊರ ತರುತ್ತಿರುವ ಕ್ಯಾಲೆಂಡರ್‌ನಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆಯುವ ಜಾತ್ರಾ ಮಹೋತ್ಸವ, ವಿಶೇಷ ಪೂಜೆ ಹಾಗೂ ಇನ್ನಿತರ ಧಾರ್ಮಿಕ ಸೇವೆಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುತ್ತದೆ. ಹಾಗಾಗಿ ಭಕ್ತರು ಭಕ್ತಿ-ಭಾವದಿಂದ ಖರೀದಿಸುತ್ತಾರೆ. ಕ್ಯಾಲೆಂಡರ್‌ನಲ್ಲಿ ಮಾದಪ್ಪನ ಲೀಲೆಯುಳ್ಳ ದೃಶ್ಯಗಳನ್ನು ಚಿತ್ರಿಸಲಾಗಿದ್ದು, ಆಕರ್ಷಿತವಾಗಿದೆ. ಇದರಿಂದ ಬೇಡಿಕೆಯು ಹೆಚ್ಚಿದ್ದು, ಕ್ಯಾಲೆಂಡರ್ ಪ್ರತಿ ವರ್ಷವೂ ನಾವಿನ್ಯತೆಯನ್ನು ಪಡೆದುಕೊಳ್ಳುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ನೌಕರರಾದ ಮಹದೇವಸ್ವಾಮಿ, ಜನಾರ್ಧನ್ ಹಾಗೂ ಇನ್ನಿತರರು ಇದ್ದರು.