ಬೋನು ಇರಿಸಿರುವ ಸ್ಥಳಕ್ಕೆ ಸಿಸಿಎಫ್ ಭೇಟಿ

ಕಾರ್ಯಾಚರಣೆಯ ಸ್ಥಳಕ್ಕೆ ಸಿಸಿಎಫ್ ಡಾ.ಮಾಲತಿಪ್ರಿಯಾ ಅವರು ತೆರಳಿ ಪರಿಶೀಲಿಸಿದರು. ಡಿಸಿಎಫ್ ಭಾಸ್ಕರ್, ಎಸಿಎಪ್ ವಿರಾಜ್ ಹೊಸೂರ್ ಇತರರಿದ್ದರು.
ಕಾರ್ಯಾಚರಣೆಯ ಸ್ಥಳಕ್ಕೆ ಸಿಸಿಎಫ್ ಡಾ.ಮಾಲತಿಪ್ರಿಯಾ ಅವರು ತೆರಳಿ ಪರಿಶೀಲಿಸಿದರು. ಡಿಸಿಎಫ್ ಭಾಸ್ಕರ್, ಎಸಿಎಪ್ ವಿರಾಜ್ ಹೊಸೂರ್ ಇತರರಿದ್ದರು.
Published on
ಹನೂರು: ನಾಗಮಲೆಗೆ ತೆರಳುವ ಹಾದಿಯಲ್ಲಿ ಅರಣ್ಯ ಇಲಾಖೆ ಕೈಗೊಂಡಿರುವ ಕಾರ್ಯಾಚರಣೆಯಲ್ಲಿ ಕ್ಯಾಮರಾ ಟ್ರ್ಯಾಪ್‌ಗೆ ಸೆರೆಯಾಗಿರುವ ಚಿರತೆಯನ್ನು ಸೆರೆ ಹಿಡಿಯಲು ತುಮಕೂರು ಬೋನು ಇರಿಸಲು ನಿರ್ಧರಿಸಲಾಗಿದೆ. ಮಂಗಳವಾರ ಸಿಸಿಎಫ್ ಡಾ. ಮಾಲತಿಪ್ರಿಯಾ ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಅಗತ್ಯ ನಿರ್ದೇಶನ ನೀಡಿದ್ದಾರೆ.
ನಾಗಮಲೆಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಬೆಂಗಳೂರಿನ 10 ವರ್ಷದ ಬಾಲಕ ಚಿರತೆ ದಾಳಿಗೆ ಬಲಿಯಾದ ಬಗ್ಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಕುರಿತು ಭಕ್ತರು, ಸಾರ್ವಜನಿಕರು ಹಾಗೂ ರೈತ ಸಂಘಟನೆ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ದಾಳಿ ನಡೆಸಿರುವ ಚಿರತೆಯನ್ನು ಸೆರೆ ಹಿಡಿಯುವಂತೆ ತೀವ್ರ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮಲೆಮಹದೇಶ್ವರ ವನ್ಯಜೀವಿ ವಿಭಾಗ ನಾಗಮಲೆಗೆ ಭಕ್ತರು ತೆರಳುವುದನ್ನು ತಾತ್ಕಾಲಿಕವಾಗಿ ನಿಷೇಧಿಸಿದ್ದು, ಭಕ್ತರು ಹಾಗೂ ಯಾತ್ರಿಕರು ಸಹಕರಿಸುವಂತೆ ಕೋರಿದೆ. ಈ ಬಗ್ಗೆ ಮ.ಬೆಟ್ಟದ ಅಲ್ಲಲ್ಲಿ ಸೂಚನಾಫಲಕವನ್ನು ಅಳವಡಿಸಲಾಗಿದೆ. ಇನ್ನು ಚಿರತೆ ಸೆರೆಗೆ 2 ದಿನಗಳಿಂದಲೂ ಕಾರ್ಯಾಚರಣೆ ಕೈಗೊಂಡಿದ್ದು, ಚಿರತೆ ಕಾರ್ಯಪಡೆ ತಂಡ, ಅಧಿಕಾರಿಗಳು ಹಾಗೂ 45ಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಿದ್ದಾರೆ. ಚಿರತೆ ದಾಳಿ ನಡೆಸಿರುವ ಆಸುಪಾಸಿನಲ್ಲಿ 4 ಬೋನ್ ಇರಿಸಲಾಗಿದ್ದು, ಒಂದರಲ್ಲಿ ನಾಯಿಯನ್ನು ಇರಿಸಲಾಗಿದೆ. ಥರ್ಮಲ್ ಡ್ರೋನ್ ಕ್ಯಾಮರಾದಲ್ಲಿ ಮಂಗಳವಾರ ಚಿರತೆ ಓಡಾಡಿರುವ ದೃಶ್ಯ ಸೆರೆಯಾಗಿದೆ. ಆದರೆ ಬೋನಿಗೆ ಬಿದ್ದಿಲ್ಲ. ಚಿರತೆ ಸೆರೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಗಾ ವಹಿಸಿದ್ದು, ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ.
ತುಮಕೂರು ಕೇಜ್ ಇರಿಸಲು ಸೂಚನೆ: ಮಂಗಳವಾರ ಕಾರ್ಯಾಚರಣೆ ಸ್ಥಳಕ್ಕೆ ಸಿಸಿಎಫ್ ಡಾ.ಮಾಲತಿಪ್ರಿಯಾ ಅವರು ಡಿಸಿಎಫ್ ಭಾಸ್ಕರ್ ಅವರೊಂದಿಗೆ ತೆರಳಿ ಪರಿಶೀಲನೆ ನಡೆಸಿದರು. ಇರಿಸಲಾಗಿರುವ ಬೋನಿಗೆ ಚಿರತೆ ಬೀಳದಿರುವುದನ್ನು ಮನಗಂಡ ಅವರು ತುಮಕೂರು ಕೇಜ್ ಇರಿಸಿ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಕಾರ್ಯಾಚರಣೆ ಮುಂದುವರಿದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net