ಕಾರು ಮರಕ್ಕೆ ಡಿಕ್ಕಿ ಹೊಡೆದು ಮೂವರು ಗಾಯ

 ಹನೂರು ಸಮೀಪದ ಎಲ್ಲೇಮಾಳ  ಮಲ್ಲಯ್ಯನಪುರ ಮಾರ್ಗಮಧ್ಯೆ ಮರಕ್ಕೆ ಡಿಕ್ಕಿ ಹೊಡೆದಿರುವ ಕಾರು.
ಹನೂರು ಸಮೀಪದ ಎಲ್ಲೇಮಾಳ ಮಲ್ಲಯ್ಯನಪುರ ಮಾರ್ಗಮಧ್ಯೆ ಮರಕ್ಕೆ ಡಿಕ್ಕಿ ಹೊಡೆದಿರುವ ಕಾರು.
Published on
ಹನೂರು: ಪಟ್ಟಣದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಎಲ್ಲೇಮಾಳ ಮಲ್ಲಯ್ಯನಪುರ ಮಾರ್ಗಮಧ್ಯೆ ಭಾನುವಾರ ಸಂಜೆ ಚಾಲಕ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಮರಕ್ಕೆ ಡಿಕ್ಕಿ ಹೊಡೆದು ಮೂವರು ಗಾಯಗೊಂಡಿದ್ದಾರೆ.
ಯಳಂದೂರಿನ ಲೋಕೇಶ್ ಎಂಬುವರು ಇಬ್ಬರ ಸ್ನೇಹಿತರ ಜತೆ ಸಂಜೆ 6ರ ವೇಳೆಯಲ್ಲಿ ಮ.ಬೆಟ್ಟಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಮಲ್ಲಯ್ಯನಪುರ ಬೋರೆಯ ಬಳಿ ಚಾಲಕ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದು, ಲೋಕೇಶ್ ಸೇರಿದಂತೆ ಮೂವರು ಗಾಯಗೊಂಡರು. ಸ್ಥಳೀಯರು ಗಾಯಾಳುಗಳನ್ನು ತುರ್ತು ವಾಹನದ ಮೂಲಕ ಹನೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟರು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ರಾಮಾಪುರ ಪೊಲೀಸರು ಪರಿಶೀಲಿಸಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net