ಬಹುಜನರನ್ನು ಒಟ್ಟು ಮಾಡಿದ ಪಕ್ಷವನ್ನು ಅಧಿಕಾರಕ್ಕೆ ತನ್ನಿ

ಯಳಂದೂರು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದ ಮುಂಭಾಗ ಭಾನುವಾರ ಆಯೋಜಿಸಿದ್ದ ಬಹುಜನರ ಜನಜಾಗೃತಿ ಕಾರ್ಯಕ್ರಮದಲ್ಲಿ ಬಿಎಸ್‌ಪಿ ಕೇಂದ್ರೀಯ ಉಸ್ತುವಾರಿ ನಿತಿನ್ ಸಿಂಗ್ ಮಾತನಾಡಿದರು. ಎಂ. ಕೃಷ್ಣಮೂರ್ತಿ, ಡಾ.ಹ.ರಾ.ಮಹೇಶ್, ಜಾಕೀರ ಹುಸೇನ್, ಬ.ಮ.ಕೃಷ್ಣಮೂರ್ತಿ, ಎನ್.ನಾಗಯ್ಯ ಇದ್ದರು.
ಯಳಂದೂರು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದ ಮುಂಭಾಗ ಭಾನುವಾರ ಆಯೋಜಿಸಿದ್ದ ಬಹುಜನರ ಜನಜಾಗೃತಿ ಕಾರ್ಯಕ್ರಮದಲ್ಲಿ ಬಿಎಸ್‌ಪಿ ಕೇಂದ್ರೀಯ ಉಸ್ತುವಾರಿ ನಿತಿನ್ ಸಿಂಗ್ ಮಾತನಾಡಿದರು. ಎಂ. ಕೃಷ್ಣಮೂರ್ತಿ, ಡಾ.ಹ.ರಾ.ಮಹೇಶ್, ಜಾಕೀರ ಹುಸೇನ್, ಬ.ಮ.ಕೃಷ್ಣಮೂರ್ತಿ, ಎನ್.ನಾಗಯ್ಯ ಇದ್ದರು.
Published on

ಬಿಎಸ್ಪಿ ಕೇಂದ್ರೀಯ ಉಸ್ತುವಾರಿ ನಿತಿನ್ ಸಿಂಗ್ ಕರೆ

ಯಳಂದೂರು: ದೇಶದ ಬಹುಜನರನ್ನು ಒಂದು ವೇದಿಕೆ ತಂದು ಒಟ್ಟು ಮಾಡಿ ಆಡಳಿತ ಚುಕ್ಕಾಣಿ ಹಿಡಿಯುವರು ಇವರೇ ಎಂದು ತೋರಿಸಿಕೊಟ್ಟದ್ದು ಬಿಎಸ್‌ಪಿ. ಮುಂದಿನ ಚುನಾವಣೆಯಲ್ಲಿ ದೇಶದ ಆಡಳಿತದ ಚುಕ್ಕಾಣಿಯನ್ನು ಹಿಡಿಯಲು ಈಗಿಂದಲೇ ನಾವು ಇದಕ್ಕೆ ತಯಾರಿ ಮಾಡಿಕೊಳ್ಳಬೇಕು ಎಂದು ಬಹುಜನ ಸಮಾಜ ಪಾರ್ಟಿ ಕೇಂದ್ರಿಯ ಉಸ್ತುವಾರಿ ನಿತಿನ್ ಸಿಂಗ್ ಕರೆ ನೀಡಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದ ಮುಂಭಾಗ ಭಾನುವಾರ ಬಿಎಸ್‌ಪಿ ವತಿಯಿಂದ ಹಮ್ಮಿಕೊಂಡಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಬಹುಜನ ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ಬಿಎಸ್‌ಪಿ ಅಧಿಕಾರಕ್ಕೆ ಬಂದಿದೆ. ಹಾಗಾಗಿ ಇದನ್ನು ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ತರಬೇಕು ಎಂಬ ಬಯಕೆ ನಮ್ಮಲ್ಲಿದೆ. ಇದಕ್ಕೆ ಪಕ್ಷ ಸಂಘಟನೆಯಲ್ಲಿ ನಾವು ತೊಡಗಿದ್ದು ಪಕ್ಷದ ಕಾರ್ಯಕರ್ತರು ಅಹರ್ನಿಶಿ ಇದಕ್ಕೆ ದುಡಿಯಬೇಕೆಂದು ಕರೆ ನೀಡಿದರು.
ಪಕ್ಷದ ರಾಜ್ಯ ಉಸ್ತುವಾರಿ ಗಂಗಾಧರ್ ಬಹುಜನ್ ಮಾತನಾಡಿ, ಬಿಎಸ್‌ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಮಾತನಾಡಿದರು.
ಪಕ್ಷದ ರಾಜ್ಯ ಉಸ್ತುವಾರಿ, ಡಾ.ಹ.ರಾ.ಮಹೇಶ್, ರಾಜ್ಯ ಉಪಾಧ್ಯಕ್ಷ ಜಾಕೀರ್ ಹುಸೇನ್, ಜಿಲ್ಲಾಧ್ಯಕ್ಷ ಬ.ಮ. ಕೃಷ್ಣಮೂರ್ತಿ, ರಾಜ್ಯ ಕಾರ್ಯದರ್ಶಿ ಎನ್.ನಾಗಯ್ಯ ಮಾತನಾಡಿದರು. ಕೆ.ಟಿ.ರಾಧಾಕೃಷ್ಣ, ಜಕೀರ್ ಅಲಿಖಾನ್, ಕೆ.ಬಿ.ಸುಧಾ, ಬಿ.ಆರ್.ಪುಟ್ಟಸ್ವಾಮಿ, ಕೆಸ್ತೂರು ಶಾಂತರಾಜು, ಮಣಿ, ಬಸವರಾಜು, ಶಿವಕುಮಾರ್, ಶಂಕರ್ ಚೇತನ್, ನಲ್ಲಿಕ್, ಚಂದ್ರಕಾಂತ್, ಶಶಿಧರ್, ರವಿ, ಶಿವಲಂಕಾರಯ್ಯ, ಚಿನ್ನಮಾದು, ಸಿದ್ದರಾಜು ಸೇರಿದಂತೆ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net