ಚಿಕಿತ್ಸೆಗೆ ಸ್ಪಂದಿಸದೆ ಬಾಲಕ ಸಾವು

 ಆಯಿಷಾ ನೂರ್
ಆಯಿಷಾ ನೂರ್
Published on

ಪ್ರಮುಖ ಮುಖ್ಯಾಂಶಗಳು

  • ನಾಲ್ಕಕ್ಕೇರಿದ ಮೃತಪಟ್ಟವರ ಸಂಖ್ಯೆ
  • ಕಾರಿಗೆ ಟಿಪ್ಪರ್ ಡಿಕ್ಕಿಯಾಗಿ ಅವಘಡ
ಗುಂಡ್ಲುಪೇಟೆ: ತಾಲೂಕಿನ ಮಲ್ಲಯ್ಯನಪುರ ಗೇಟ್ ಸಮೀಪ ಸಂಭವಿಸಿದ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ನಹಿಯ ಮುಬಾರಕ್(9) ಮಂಗಳವಾರ ತಡರಾತ್ರಿ ಸಾವಿಗೀಡಾಗಿದ್ದಾನೆ.
ಟಿಪ್ಪರ್ ಹಾಗೂ ಕಾರಿನ ನಡುವೆ ಮಂಗಳವಾರ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಕೇರಳದ ಕ್ಯಾಲಿಕಟ್ ಮೂಲದವರಾದ ಉಪನ್ಯಾಸಕಿ ಆಯಿಷಾ ನೂರ್( 41), ಚಾರ್ಟೆಡ್ ಅಕೌಂಟೆಂಟ್ ನುಹ ಮುಬಾರಕ್ (18) ಸ್ಥಳದಲ್ಲಿ ಮೃತಪಟ್ಟಿದ್ದರು. ಕಾರು ಚಾಲನೆ ಮಾಡುತ್ತಿದ್ದ ಬೆಂಗಳೂರಿನ ಬೆಲ್ ಕಂಪನಿ ಅಧಿಕಾರಿ ಮಹಮ್ಮದ್ ಅಜೀರ್(37) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಅವಘಡದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ನಹಿಯ ಮುಬಾರಕ್ ಕೂಡ ಅಸುನೀಗಿದ್ದು, ಮನಕಲುಕುವಂತಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net