ಚಾಮರಾಜನಗರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸುಧಾ ಮತ್ತು ನಗರಸಭೆ ಎಇಇ ಕೆ.ಎಚ್.ಪ್ರಕಾಶ್ ಅವರು ಸಿಬ್ಬಂದಿಗಳೊಂದಿಗೆ ವಿವಿಧ ಬಡಾವಣೆಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ರಾಮಸಮುದ್ರ ಬಡಾವಣೆಯ ದುರ್ಗಿ ಬೀದಿಗೆ ಬೇಟಿ ನೀಡಿದ ಸಂದರ್ಣದಲ್ಲಿ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಈ ವೇಳೆ ನಿವಾಸಿ ಮಂಜೇಶ್ ಮಾತನಾಡಿ, ನಮ್ಮ ಬಡಾವಣೆಯಲ್ಲಿ ತುಂಬಾ ನೀರಿನ ಸಮಸ್ಯೆ ಇದೆ. ಈಗಾಗಲೇ ಹೊಸ ಬೋರ್‌ವೆಲ್ ಕೊರೆಸಲು ಜಾಗ ಗುರುತಿಸಿದ್ದು, ಬೋರ್ ಕೊರೆಸಬೇಕು ಎಂದು ಅಧಿಕಾರಿಗಳ ಗಮನಕ್ಕೆ ತಂದರು. ಶೀಘ್ರದಲ್ಲೇ ಬೋರ್ ಕೊರೆಸುವಂತೆ ಸುಧಾ ಅವರು ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ನೀರಿನ ಸಮಸ್ಯೆ ಇರುವ ಇನ್ನಿತರೆ ಬಡಾವಣೆಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಿದರು.