ಇನ್ನು ಪ್ರತಿ ಸಲದ ಆಯವ್ಯಯ ಮಂಡನೆ ವೇಳೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡಬೇಕೆಂದು ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿಬರುತ್ತಲೇ ಇರುತ್ತದೆ. ಚಾಮರಾಜನಗರ, ಗುಂಡ್ಲುಪೇಟೆ, ಹನೂರು, ಯಳಂದೂರು, ಕೊಳ್ಳೇಗಾಲ ತಾಲೂಕು ಕೇಂದ್ರಗಳಲ್ಲೇ ಇನ್ನೂ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಹಲವೆಡೆ ಸೌಲಭ್ಯಗಳು ಮರೀಚಿಕೆಯಾಗಿವೆ. ನೂತನ ಸಿಎಂ ಎದುರು ಚಾಮರಾಜನಗರದ ಪ್ರಗತಿಗೆ ಹಲವು ಸವಾಲುಗಳಿದ್ದು, ಆಕ್ಸಿಜನ್ ದುರಂತದ ಸಂತ್ರಸ್ತರಿಗೆ ಡಿ.ಕೆ.ಶಿವಕುಮಾರ್ ಸ್ಪಂದಿಸಿದ್ದ ರೀತಿಯಲ್ಲೇ ಜಿಲ್ಲೆಯ ಪ್ರಗತಿಗೂ ಸಹಕಾರ ನೀಡಬೇಕೆಂಬ ಒತ್ತಾಯವಿದೆ.