ಕಲಾ ಜಗತ್ತಿನಲ್ಲಿ ಗಡಿಜಿಲ್ಲೆ ಕಲಾವಿದರು ಕ್ರಿಯಾಶೀಲ

ಚಾಮರಾಜನಗರದ  ರೋಟರಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ರೋಟರಿ ಭವನದಲ್ಲಿ ಚೇತನ ಕಲಾ ವಾಹಿನಿ ವತಿಯಿಂದ ರಂಗ ಸಾಧಕರನ್ನು ಸನ್ಮಾನಿಸಲಾಯಿತು. ಮಹದೇವ ಶಂಕನಪುರ,  ಮಹಮ್ಮದ್ ಅಸ್ಗರ್(ಮುನ್ನಾ),  ಡ್ರಾಮಾ ಮಾಸ್ಟರ್ ಶಿವಣ್ಣ, ಎಂ.ಎನ್.ಮಹದೇವು, ಚೇತನ ಕಲಾವಾಹಿನಿ ಅಧ್ಯಕ್ಷ ಜಿ.ರಾಜಪ್ಪ , ಸುರೇಂದ್ರ, ಗೋವಿಂದರಾಜು, ಶಿವಸ್ವಾಮಿ ಇತರರಿದ್ದರು.
ಚಾಮರಾಜನಗರದ ರೋಟರಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೋಟರಿ ಭವನದಲ್ಲಿ ಚೇತನ ಕಲಾ ವಾಹಿನಿ ವತಿಯಿಂದ ರಂಗ ಸಾಧಕರನ್ನು ಸನ್ಮಾನಿಸಲಾಯಿತು. ಮಹದೇವ ಶಂಕನಪುರ, ಮಹಮ್ಮದ್ ಅಸ್ಗರ್(ಮುನ್ನಾ), ಡ್ರಾಮಾ ಮಾಸ್ಟರ್ ಶಿವಣ್ಣ, ಎಂ.ಎನ್.ಮಹದೇವು, ಚೇತನ ಕಲಾವಾಹಿನಿ ಅಧ್ಯಕ್ಷ ಜಿ.ರಾಜಪ್ಪ , ಸುರೇಂದ್ರ, ಗೋವಿಂದರಾಜು, ಶಿವಸ್ವಾಮಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಿರಿಯ ಸಾಹಿತಿ ಮಹದೇವ ಶಂಕನಪುರ ಬಣ್ಣನೆ
  • ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ
  • ರಂಗಭೂಮಿ ಸಾಧಕರಿಗೆ ಗೌರವ ಸನ್ಮಾನ
ಚಾಮರಾಜನಗರ: ರಂಗಭೂಮಿ ಜೀವಂತ ಕಲಾ ಪ್ರಕಾರಗಳಲ್ಲಿ ಒಂದಾಗಿದ್ದು, ಜಿಲ್ಲೆಯ ಕಲಾವಿದರು ರಂಗಭೂಮಿಯಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದಾರೆ ಎಂದು ಹಿರಿಯ ಸಾಹಿತಿ ಮಹದೇವ ಶಂಕನಪುರ ಹೇಳಿದರು.
ನಗರದ ರೋಟರಿ ಭವನದಲ್ಲಿ ಚೇತನ ಕಲಾವಾಹಿನಿ, ರೋಟರಿ ಸಂಸ್ಥೆ, ಶ್ರೀಮಹದೇಶ್ವರ ಕಲಾ ಸಂಘ, ಶ್ರೀಬೀರೇಶ್ವರ ಕಲಾ ಸಂಘ ಹಾಗೂ ಶ್ರೀಸಿದ್ಧಮಲ್ಲೇಶ್ವರ ಕಲಾ ಸಂಘ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವರಂಗಭೂಮಿ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮೊಟ್ಟಮೊದಲು 1961 ರಲ್ಲಿ ಅಂತಾರಾಷ್ಟ್ರೀಯ ರಂಗಭೂಮಿ ಸಂಸ್ಥೆಯು ವಿಶ್ವ ರಂಗಭೂಮಿ ದಿನವನ್ನು ಆಚರಣೆ ಮಾಡುವುದನ್ನು ಚಾಲನೆ ಮಾಡಿತು. ಮಾ. 27 ನ್ನು ವಿಶ್ವ ರಂಗಭೂಮಿ ದಿನವನ್ನಾಗಿ ಆಚರಣೆ ಮಾಡಲಾಗುತಿದೆ. ರಂಗಭೂಮಿಗೆ ಸುಮಾರು 25 ಸಾವಿರ ವರ್ಷಗಳ ಇತಿಹಾಸವಿದೆ. ಅಂತಹ ರಂಗಭೂಮಿಯನ್ನು ನಿರಂತರವಾಗಿ ಉಳಿಸಿ-ಬೆಳೆಸಿಕೊಂಡು ಹೋಗುವುದು ಯುವ ತಲೆಮಾರಿನ ಜವಾಬ್ದಾರಿಯಾಗಿದೆ. ರಂಗಭೂಮಿ ಎಲ್ಲಾ ಕಲಾಪ್ರಕಾರಗಳಿಗೂ ತಾಯಿಬೇರಾಗಿದೆ ಎಂದರು.
ಜಿಲ್ಲೆಯಲ್ಲಿ ಹೆಚ್ಚಿನ ಕಲಾವಿದರು ರಂಗಭೂಮಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಆದರೆ ಸಿನಿಮಾ ಮಾಧ್ಯಮ ಜನರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿದೆ. ಕಿರುತೆರೆ ಹಾಗೂ ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದ ಜನರು ರಂಗಭೂಮಿ ಕಲೆಯಿಂದ ವಿಮುಖರಾಗುತ್ತಿದ್ದಾರೆ. ಈ ನಡುವೆ ವಿವಿಧ ಸಂಘ-ಸಂಸ್ಥೆಗಳು ರಂಗ ಚಟುವಟಿಕೆಗಳನ್ನು ನಡೆಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.
ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್(ಮುನ್ನಾ) ಮಾತನಾಡಿ, ಚಾಮರಾಜನಗರ ಜಾನಪದ ಕಲೆಗಳ ತವರೂರಾಗಿದ್ದು, ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗ್ರಾಮೀಣ ಭಾಗದ ಜನರು ಇಂದಿಗೂ ರಂಗಭೂಮಿ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರಂಗಭೂಮಿ ಕಲಾವಿದರಾದ ಡಾ.ರಾಜಶೇಖರ ಪಂಡಿತ್, ಗೌಡಿಕೆ
ಮಹದೇವಸ್ವಾಮಿ, ಆರ್.ಶ್ರೀಕಂಠಸ್ವಾಮಿ, ಸುಬ್ಬೇಗೌಡ, ಟಿ.ಎಸ್.ಶಿವಕುಮಾರ್, ಮಂಡ್ಯ ಪವಿತ್ರಗೌಡ ಅವರಿಗೆ ರಂಗ ಗೌರವ ಸಲ್ಲಿಸಲಾಯಿತು. ಎಲ್ಲಾ ಕಲಾವಿದರು ರಂಗಗೀತೆಗಳನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಡ್ರಾಮಾ ಮಾಸ್ಟರ್ ಶಿವಣ್ಣ, ಎಂ.ಎನ್.ಮಹದೇವು, ಚೇತನ ಕಲಾವಾಹಿನಿ ಅಧ್ಯಕ್ಷ ಜಿ.ರಾಜಪ್ಪ , ಸುರೇಂದ್ರ, ಗೋವಿಂದರಾಜು, ಶಿವಸ್ವಾಮಿ, ಬೀರೇಗೌಡ, ಸಂಪತ್ ಕುಮಾರ್, ಮಂಜು, ಮಹದೇವಸ್ವಾಮಿ, ನಿಂಗಯ್ಯ, ರಾಮಣ್ಣ, ರಾಜೇಶ್, ವೆಂಕಟರಮಣ, ರಾಮಣ್ಣ, ನಾಗರಾಜು, ಮಲ್ಲಿಕಾರ್ಜುನ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net