ಜಿಲ್ಲೆಯಲ್ಲಿ ಎಸ್‌ಐಆರ್ ಅನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯನಿರ್ವಹಿಸಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸೂಚನೆ ನೀಡಿದರು. ನಗರದ ಕುಲುಮೆ ರಸ್ತೆಯಲ್ಲಿರುವ ಬಿಜೆಪಿ ಕಚೇರಿಗೆ ಸೋಮವಾರ ಭೇಟಿ ಆಯೋಜಿಸಿದ್ದ ಎಸ್‌ಐಆರ್ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿಯ ಕ್ಷೇತ್ರ ಮಟ್ಟದ ಸಂಯೋಜಕರು-1 ಮತ್ತು 2ಗಳು ಎಸ್‌ಐಆರ್ ಅನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್‌ಐಆರ್‌ಗಳು ನೊಂದಣಿಯ ಬಗ್ಗೆ ಪರಿಶೀಲನೆ ಮಾಡಬೇಕು. ಈ ವಿಚಾರದಲ್ಲಿ ಏನಾದರೂ ಸಮಸ್ಯೆಗಳಾಗುತ್ತಿದ್ದರೆ ತಿಳಿಸಬೇಕು. ಎಸ್‌ಐಆರ್ ಮೇಲೆ ಜಿಲ್ಲೆಯಲ್ಲಿ ಕಾಂಗ್ರೆಸ್ ಬೀರಬಹುದಾದ ಪರಿಣಾಮಗಳನ್ನು ತಿಳಿದುಕೊಂಡು ಪಾರದರ್ಶಕವಾಗಿ ಎಸ್‌ಐಆರ್ ನಡೆಯುವಂತೆ ಮಾಡಬೇಕು ಎಂದು ನಿರ್ದೇಶನ ನೀಡಿದರು. ಮಾಜಿ ಶಾಸಕ ಎಸ್.ಬಾಲರಾಜು, ವಿಭಾಗ ಪ್ರಭಾರಿ ಮರಳಾಪುರ ಸ್ವಾಮಿ, ಸಹಪ್ರಭಾರಿ ಇ.ಸಿ.ಲಿಂಗರಾಜು, ಮುಖಂಡರಾದ ನೂರೊಂದು ಶೆಟ್ಟಿ, ಆರ್.ಸುಂದರ್, ಹನೂರು ವೆಂಕಟೇಶ್, ಪಿ.ವೃಷಭೇಂದ್ರಪ್ಪ, ವೈ.ಸಿ.ನಾಗೇಂದ್ರ, ಸಿ.ಎನ್.ಬಾಲರಾಜು, ಕೋಡಿಉಗನೆ ಮಂಜು, ಹೊನ್ನೂರು ಮಹದೇಸ್ವಾಮಿ ಅರಕಲವಾಡಿ ನಾಗೇಂದ್ರ, ಸುರೇಶ್, ಸೂರ್ಯಕುಮಾರ್, ಕಾಡಳ್ಳಿ ಕುಮಾರ್ ಇತರರು ಪಾಲ್ಗೊಂಡಿದ್ದರು.