ಜೀವವೈವಿಧ್ಯ ಉಳಿವು ಅನಿವಾರ್ಯ

ಯಳಂದೂರು ಪಟ್ಟಣದ ರಾಘವೇಂದ್ರ ಮಠದಲ್ಲಿ ಗಾಯತ್ರಿ ಬಳಗದ ವತಿಯಿಂದ ಮುಖ್ಯಮಂತ್ರಿ ಪದಕ ವಿಜೇತ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ. ಅನಂತರಾಮುರನ್ನು ಸನ್ಮಾನಿಸಲಾಯಿತು.  ಸೇತು ಮಾಧವನ್, ರಘುನಾಥ್, ನಾರಾಯಣರಾವ್, ಫಣೀಶ್, ಶ್ರೀಧರ್ ಇತರರು ಇದ್ದರು.
ಯಳಂದೂರು ಪಟ್ಟಣದ ರಾಘವೇಂದ್ರ ಮಠದಲ್ಲಿ ಗಾಯತ್ರಿ ಬಳಗದ ವತಿಯಿಂದ ಮುಖ್ಯಮಂತ್ರಿ ಪದಕ ವಿಜೇತ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ. ಅನಂತರಾಮುರನ್ನು ಸನ್ಮಾನಿಸಲಾಯಿತು. ಸೇತು ಮಾಧವನ್, ರಘುನಾಥ್, ನಾರಾಯಣರಾವ್, ಫಣೀಶ್, ಶ್ರೀಧರ್ ಇತರರು ಇದ್ದರು.
Published on
ಯಳಂದೂರು: ಭೂಮಿಯಲ್ಲಿರುವ ಜೀವ ಸಂಕುಲ, ಜೀವವೈವಿಧ್ಯ ಉಳಿಸದಿದ್ದರೆ ಮನುಷ್ಯ ಬದುಕುವುದು ಕಷ್ಟವಾಗುತ್ತದೆ. ಇದಕ್ಕೆ ಹಾನಿ ಮಾಡದೆ ಇದನ್ನು ಜೋಪಾನ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಮುಖ್ಯಮಂತ್ರಿ ಪದಕ ವಿಜೇತ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಅನಂತರಾಮು ಅಭಿಪ್ರಾಯಪಟ್ಟರು.
ಪಟ್ಟಣದ ರಾಘವೇಂದ್ರಸ್ವಾಮಿ ಮಠದಲ್ಲಿ ಇತ್ತೀಚೆಗೆ ಗಾಯತ್ರಿ ಬಳಗದಿಂದ ಹಮ್ಮಿಕೊಂಡಿದ್ದ ಜೈವಿಕ ಸಂರಕ್ಷಣಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಜಿಲ್ಲೆ ಇಡೀ ರಾಜ್ಯದಲ್ಲಿ ಹೆಚ್ಚು ಕಾಡನ್ನು ಹೊಂದಿರುವ ಜಿಲ್ಲೆಯಾಗಿದೆ. ಇಲ್ಲಿನ ಬಿಳಿಗಿರಿರಂಗನಬೆಟ್ಟ ಪೂರ್ವ ಹಾಗೂ ಪಶ್ಚಿಮ ಘಟ್ಟಗಳು ಸಂದಿಸುವ ಸ್ಥಳವಾಗಿದೆ. ಇಲ್ಲಿ ಅನೇಕ ಬಗೆಯ ಕಾಡುಗಳನ್ನು ಒಂದೇ ಅರಣ್ಯದಲ್ಲಿ ಕಾಣಬಹುದಾಗಿದೆ. ಹಾಗಾಗಿ ಈ ಕಾಡಿನಲ್ಲಿ ವಿವಿಧ ಬಗೆಯ ಪ್ರಾಣಿ, ಪಕ್ಷಿ, ಕೀಟ, ಸರಿಸೃಪ, ಉಭಯವಾಸಿಗಳು, ಗಿಡ, ಮರ, ಬಳ್ಳಿ, ಪೊದೆ ಸಸ್ಯಗಳು ಸೇರಿದಂತೆ ಅನೇಕ ಜೀವವೈವಿಧ್ಯ ಕಾಣಬಹುದು. ಇದು ಕಾಡಿನ ಕೊಂಡಿಯಾಗಿವೆ. ಶುದ್ಧ ಆಮ್ಲಜನಕವನ್ನು ಪೂರೈಸುವ ಜತೆಗೆ ಮನುಕುಲ ಹಾಗೂ ಜೀವ ಸಂಕುಲಕ್ಕೆ ಬೇಕಾದ ಎಲ್ಲವನ್ನೂ ಕೊಡುವ ಕಾಡುಗಳನ್ನು ನಾಶ ಮಾಡಿದ್ದಲ್ಲಿ ಇಡೀ ಜೀವ ಸಂಕುಲಕ್ಕೆ ಕಂಟಕವಾಗುತ್ತದೆ. ಹಾಗಾಗಿ ಅರಣ್ಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪ್ಲಾಸ್ಟಿಕ್‌ನಂತಹ ಪದಾರ್ಥಗಳನ್ನು ಕಾಡಿನಲ್ಲಿ ಬೀಸಾಡಬಾರದು. ಅರಣ್ಯ ಸಂಪತ್ತನ್ನು ಲೂಟಿ ಮಾಡುವರ ಬಗ್ಗೆ ಇಲಾಖೆಗೆ ಮಾಹಿತಿ ನೀಡಬೇಕು. ವನ್ಯಪ್ರಾಣಿಗಳ ಸಂರಕ್ಷಣೆಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಇದೆ ಸಂದರ್ಭದಲ್ಲಿ ಗಾಯತ್ರಿ ಬಳಗದ ವತಿಯಿಂದ ಇವರನ್ನು ಸನ್ಮಾನಿಸಲಾಯಿತು. ಬಳಗದ ಸದಸ್ಯರಾದ ಸೇತು ಮಾಧವನ್, ರಘುನಾಥ್, ನಾರಾಯಣರಾವ್, ಫಣೀಶ್, ಶ್ರೀಧರ್ ಸೇರಿದಂತೆ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net