ಪ್ರಧಾನ ಮಂತ್ರಿ ಆವಾಸ್ (ಪಿಎಂಎವೈ)ಯೋಜನೆ ಕೇಂದ್ರ ಸರ್ಕಾರ ಯೋಜನೆಯಾಗಿದೆ. ಯೋಜನೆಗೆ ತಾಲೂಕಿನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಮನೆ ನಿರ್ಮಾಣದ ಸಲುವಾಗಿ ಖಾಲಿ ನಿವೇಶನ, ಗೋಡೆಗಳ ನಿರ್ಮಾಣ ಮತ್ತು ಪೂರ್ಣಗೊಂಡ ನಂತರ ಮೂರು ಹಂತದಲ್ಲಿ ಬಿಲ್‌ಗಳನ್ನು ನೀಡಲಾಗುತ್ತದೆ. ಆದರೆ ತಾಂತ್ರಿಕ ಕಾರಣ ನೀಡಿ ಫಲಾನುಭವಿಗಳಿಗೆ ಬಾಕಿ ಇರುವ ಬಿಲ್‌ಗಳನ್ನು ನೀಡುತ್ತಿಲ್ಲ. ಇದರಿಂದ ಮನೆ ನಿರ್ಮಾಣ ಪೂರ್ಣಗೊಳಿಸಲು ಸಾಧ್ಯವಾಗದೆ ಮತ್ತು ಬಿಲ್‌ನ ಹಣ ಬರುವ ನೀರಿಕ್ಷೆಯಲ್ಲಿ ಮಾಡಿರುವ ಸಾಲ ತೀರಿಸಲಾಗದೆ ಫಲಾನುಭವಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟವರು ಹಣ ಕೊಡಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.