ಬಿಳಿಗಿರಿರಂಗಪ್ಪನಿಗೆ ಕಲ್ಯಾಣೋತ್ಸವ ಸೇವೆ

  ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ದೇವರ ಉತ್ಸವ ಮೂರ್ತಿಯನ್ನು  ಮೆರವಣಿಗೆ ಮಾಡುವ ಮೂಲಕ  ಸಂಕ್ರಾಂತಿ ಚಿಕ್ಕ ರಥೋತ್ಸವಕ್ಕೆ ಮಂಗಳ ಹಾಡಲಾಯಿತು. ಅರ್ಚಕರು, ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಿಬ್ಬಂದಿ ಹಾಜರಿದ್ದರು.

Published on
ಯಳಂದೂರು : ತಾಲೂಕಿನ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಬಿಳಿಗಿರಿ ರಂಗನಾಥಸ್ವಾಮಿ ಸಂಕ್ರಾಂತಿ ಚಿಕ್ಕ ರಥೋತ್ಸವಕ್ಕೆ ಭಾನುವಾರ ತೆರೆ ಎಳೆಯಲಾಯಿತು.
ಶ್ರೀ ಬಿಳಿಗಿರಿರಂಗನಾಥಸ್ವಾಮಿ, ಆಲಮೇಲಮ್ಮನವರ ದೇವರ ಚಿಕ್ಕ ಜಾತ್ರೆ ಮಹೋತ್ಸವದ ಕೊನೆಯ ಭಾಗವಾಗಿ ಭಾನುವಾರ ಬೆಳಗ್ಗೆ ಸಂಧಾನಸೇವೆ, ಅವಭೃತ ಮಂಗಳಸ್ನಾನವನ್ನು ಕಲ್ಯಾಣ ಕೊಳದಲ್ಲಿ ನೆರವೇರಿಸಲಾಯಿತು. ಬಿಳಿಗಿರಿ ರಂಗನಾಥಸ್ವಾಮಿ, ಅಲಮೇಲಮ್ಮ ಉತ್ಸವ ಮೂರ್ತಿಗಳನ್ನು ವಾದ್ಯಮೇಳದಿಂದ ಸೋಲಿಗರ ಆರಾಧ್ಯ ಧೈವ ಭಾವನಾದ ರಂಗಪ್ಪನನ್ನು ಮೆರವಣಿಗೆ ಮಾಡಿಕೊಂಡು ಮತ್ತೆ ದೇಗುಲದಲ್ಲಿ ಇಡುವ ಮೂಲಕ ಜಾತ್ರೆಗೆ ತೆರೆ ಬಿದ್ದಿತ್ತು. ನಂತರ ದೇವರ ಚಿನ್ನದ ಆಭರಣ
ಗಳನ್ನು ತಾಲೂಕು ಉಪ ಖಜಾನೆಗೆ ಬಿಗಿ ಬಂದೋಬಸ್ತ್‌ನಲ್ಲಿ ಇಡಲಾಯಿತು ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎನ್. ಸುರೇಶ್ ಮಾಹಿತಿ ನೀಡಿದ್ದಾರೆ. ಈ ಬಾರಿ ಬಹಳ ವಿಜೃಂಭಣೆಯಿಂದ ಜಾತ್ರೆ ಕಾರ್ಯಕ್ರಮಗಳು ನಡೆದಿದ್ದು, ಇದಕ್ಕೆ ಸಹಕರಿಸಿ ಜಿಲ್ಲಾಡಳಿತ, ಅಧಿಕಾರಿಗಳ ವರ್ಗ, ಪೊಲೀಸ್ ಇಲಾಖೆ, ದೇವಸ್ಥಾನದ ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಶಾಸಕ ಎ.ಆರ್.ಕೃಷ್ಣಮೂರ್ತಿ ಸಹಕಾರ ಪ್ರಶಂಸೆಗೆ ಪಾತ್ರವಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net