

ಪ್ರಮುಖ ಮುಖ್ಯಾಂಶಗಳು
ಚಾಮರಾಜನಗರ:
ಚಿತ್ರನಟರಿಗೆ ಜೂನಿಯರ್‌ಗಳು ಇರುವಂತೆ ಕಾಡಾನೆಯೊಂದಕ್ಕೂ ಜೂನಿಯರ್‌ಗಳು ಇದ್ದು, ಈ ಗಜದ ಕಾಲ ಮುಗಿದರೂ ಅಧ್ಯಾಯ ನಿಲ್ಲದಾಗಿದೆ..!
ಇದೇ ರೀತಿ ‘ಮಿಸ್ಟರ್ ಕಬಿನಿ’ ಎಂದೇ ಖ್ಯಾತಿಯಾಗಿದ್ದ ಭೋಗೇಶ್ವರ ಎಂಬ ಕಾಡಾನೆಗೂ ಮೈಸೂರು, ಚಾಮರಾಜನಗರ ಜಿಲ್ಲೆಗಳ ಅರಣ್ಯಗಳಲ್ಲಿ ವನ್ಯಪ್ರೇಮಿಗಳ ಪ್ರೀತಿಯ ಪರಿಣಾಮ ಜೂನಿಯರ್‌ಗಳು ಸೃಷ್ಟಿಯಾಗುತ್ತಲೇ ಇದ್ದಾರೆ.
2024ರ ಮೇನಲ್ಲಿ ಗುಂಡ್ಲುಪೇಟೆ ತಾಲೂಕಿನ ಹಂಗಳ ಸುತ್ತಮುತ್ತ ದಂತ ವಕ್ರವಾಗಿ ಬೆಳೆದಿದ್ದ ಕಾಡಾನೆಯೊಂದು ಉಪಳ ನೀಡುತ್ತಿತ್ತು. ಇದಕ್ಕೆ ಆಹಾರ ಸೇವೆನೆ ಮಾಡಲು ವಕ್ರ ದಂತ ಅಡ್ಡಿಯಾಗುತ್ತಿತ್ತು. ಸೆರೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಆನೆಯನ್ನು ಕಾಡಿಗೆ ಬಿಡುವ ಮುನ್ನ ವಕ್ರವಾಗಿದ್ದ ದಂತಕ್ಕೆ ಕತ್ತರಿ ಪ್ರಯೋಗ ಮಾಡಿತ್ತು. ಆನೆಗಳಿಗೆ ಈ ದಂತ ಮಡಿಲಿನಲ್ಲೇ ಮರಣವನ್ನೂ ಹಿಡಿದಿಟ್ಟಿದೆ. ದಂತಕ್ಕಾಗಿ ಆನೆಗಳನ್ನು ಬೇಟೆಯಾಡಿ ಸಾಯಿಸುವ ಪ್ರಕರಣಗಳಿವೆ. ದಂತಗಳಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಅಂತರಾಷ್ಟ್ರೀಯ ಮಟ್ಟದ ಜಾಲ ಇದಕ್ಕೆ ಬೆನ್ನೆಲುಬಾಗಿದ್ದು, ಈ ಕಾರಣಕ್ಕೆ ಆನೆಗಳ ಬೇಟೆ, ದಂತ ಸಾಗಾಣೆ, ಮಾರಾಟ ಶಿಕ್ಷಾರ್ಹ ಅಪರಾಧವಾಗಿದೆ.
ಕಾಡಿನಲ್ಲಿ ಅಸಂಖ್ಯಾತ ಆನೆಗಳಿದ್ದರೂ, ವರ್ಷಗಳೇ ಉರುಳಿದರೂ ಭೋಗೇಶ್ವರ ಜನಮಾನಸದಲ್ಲಿ ಉಳಿದಿದೆ. ಸಾರಿ ವೇಳೆ ಬೇರೆ ಆನೆಯೊಂದನ್ನು ನೋಡಿದಾಗ ನನಗೆ ಭೋಗೇಶ್ವರ ನೆನಪಾಗಿದ್ದ.