ಈ ಜಾತ್ರೆಗೆ ವಿಶೇಷವಾಗಿ ಧರ್ಮಪುರಿ, ಕೃಷ್ಣಗಿರಿ, ಮೆಟ್ಟೂರು ಸೇರಿದಂತೆ ತಮಿಳುನಾಡಿನ ಇನ್ನಿತರೆ ಕಡೆಗಳಿಂದ ಹೆಚ್ಚಿನ ಭಕ್ತರು ಮ.ಬೆಟ್ಟಕ್ಕೆ ಆಗಮಿಸಲಿದ್ದಾರೆ. ಜತೆಗೆ ಬೆಂಗಳೂರು ಗ್ರಾಮಾಂತರದ ಕಡೆಯಿಂದ ಸಾವಿರಾರು ಭಕ್ತರು ತಾಲೂಕಿನ ದಂಟಳ್ಳಿ ಸಮೀಪದ ದಬ್ಬಗುಳಿ ಬಸವೇಶ್ವರ ದೇಗುಲದ ಬಳಿ ಕಾವೇರಿ ನದಿಯನ್ನು ದಾಟಿ ಕೌದಳ್ಳಿ ಮಾರ್ಗದ ಮೂಲಕ ಕಾಲ್ನಡಿಗೆಯ ಮೂಲಕ ಕ್ಷೇತ್ರಕ್ಕೆ ಈಗಾಗಲೇ ತೆರಳುತ್ತಿದ್ದಾರೆ. ಅಲ್ಲದೇ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಈ ಭಾಗದ ಇನ್ನಿತರೆ ಜಿಲ್ಲೆಯಿಂದಲೂ ಭಕ್ತರು ಬಿರು ಬಿಸಿಲನ್ನು ಲೆಕ್ಕಿಸದೇ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದು, ಯುಗಾಧಿ ಜಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.