ತಾಲೂಕಿನಾದ್ಯಂತ 9 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಪರೀಕ್ಷೆ ಬರೆಯುತ್ತಿದ್ದಾರೆ. ಪಟ್ಟಣದ ಎಸ್.ವಿ.ಕೆ ಬಾಲಕಿಯರ ಕಾಲೇಜು, ಸಂತ ಫ್ರಾನ್ಸಿಸ್ ಅಸ್ಸಿಸಿ ಪ್ರೌಢಶಾಲೆ, ಶ್ರೀ ವಾಸವಿ ವಿದ್ಯಾಕೇಂದ್ರ, ಸರ್ಕಾರಿ ಎಂಜಿಎಸ್‌ವಿ ಕಾಲೇಜು, ಲಯನ್ಸ್ ಪ್ರೌಢಶಾಲೆ, ಸತ್ತೇಗಾಲ ಸರ್ಕಾರಿ ಪ್ರೌಢಶಾಲೆ, ಪ್ರಕಾಶ್ ಪಾಳ್ಯ ಡಾನ್ ಬಾಸ್ಕೋ ಪ್ರೌಢಶಾಲೆ, ಕಾಮಗೆರೆ ಸಂತ ಪ್ರಾನ್ಸೀಸ್ ಕ್ಷೇವಿಯರ್ ಪ್ರೌಢ ಶಾಲೆ ಹಾಗೂ ಚಿಲಕವಾಡಿ ಪ್ರೌಢಶಾಲೆ ಸೇರಿ ಒಟ್ಟು 2019 ವಿದ್ಯಾರ್ಥಿಗಳ ಪೈಕಿ 2004 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 962 ಬಾಲಕರ ಪೈಕಿ 953 ಬಾಲಕರು ಪರೀಕ್ಷೆಗೆ ಹಾಜರಾಗಿದ್ದರು. 9 ಮಕ್ಕಳು ಗೈರಾಗಿದ್ದರು. 1023 ಬಾಲಕಿಯರ ಪೈಕಿ 1,018 ಮಕ್ಕಳು ಹಾಜರಾಗಿದ್ದು. 5 ಮಕ್ಕಳು ಗೈರಾಗಿದ್ದರು. ಪರೀಕ್ಷಾ ಕೇಂದ್ರಗಳಿಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.