ಬಿ.ರಾಚಯ್ಯ ಮತ್ತು ಗೌರಮ್ಮ ದಂಪತಿಗಳ ಮಾಸದ ನೆನಪು

ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದಲ್ಲಿ ಆಯೋಜಿಸಿದ್ದ ಬಿ.ರಾಚಯ್ಯ ಮತ್ತು ಗೌರಮ್ಮ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು. ಎ.ಆರ್.ಕೃಷ್ಣಮೂರ್ತಿ, ಬಿ.ಬಿ.ಲಿಂಗಯ್ಯ, ಎ.ಆರ್.ಬಾಲರಾಜ್, ತೋಟೇಶ್, ಆರ್.ಮಹದೇವ್ ಇನ್ನಿತರರಿದ್ದರು.
ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದಲ್ಲಿ ಆಯೋಜಿಸಿದ್ದ ಬಿ.ರಾಚಯ್ಯ ಮತ್ತು ಗೌರಮ್ಮ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು. ಎ.ಆರ್.ಕೃಷ್ಣಮೂರ್ತಿ, ಬಿ.ಬಿ.ಲಿಂಗಯ್ಯ, ಎ.ಆರ್.ಬಾಲರಾಜ್, ತೋಟೇಶ್, ಆರ್.ಮಹದೇವ್ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆಲೂರು ಗ್ರಾಮದಲ್ಲಿ ಜರುಗಿದ ಪುಣ್ಯಸ್ಮರಣೆ ಕಾರ್ಯಕ್ರಮ
  • ಹಲವಾರು ಗಣ್ಯರು ಹಾಗೂ ಸಾರ್ವಜನಿಕರು ಭಾಗಿ
  • ಪ್ರತಿಯೊಬ್ಬರಿಗೂ ಅಚ್ಚುಕಟ್ಟಾದ ಊಟದ ವ್ಯವಸ್ಥೆ
ಚಾಮರಾಜನಗರ: ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರ 26ನೇ ವರ್ಷ ಹಾಗೂ ಗೌರಮ್ಮ ಅವರ ಮೊದಲನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಮಹನೀಯರ ನೆನಪುಗಳನ್ನು ಮಾಸದಂತೆ ಮಾಡಿತು.
ತಾಲೂಕಿನ ಆಲೂರು ಗ್ರಾಮದ ಬಿ.ರಾಚಯ್ಯ ಸ್ಮಾರಕ ಭವನದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮ ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರು ನಾಡಿಗೆ ಸಲ್ಲಿಸಿದ ಸೇವೆ ಮತ್ತು ಅವರಿಗೆ ಬೆನ್ನೆಲುಬಾಗಿ ನಿಂತಿದ್ದ ಪತ್ನಿ ಗೌರಮ್ಮ ಅವರ ಮಮಕಾರವನ್ನು ಕುಟುಂಬದವರು, ಗ್ರಾಮಸ್ಥರು, ಹಲವು ಕ್ಷೇತ್ರಗಳ ಗಣ್ಯರು ಹಾಗೂ ಸಾರ್ವಜನಿಕರು ನೆನಪುಮಾಡಿಕೊಳ್ಳುವಂತೆ ಮಾಡಿತು. ಬಿ.ರಾಚಯ್ಯ ಅವರ ಜೀವನ ಚರಿತ್ರೆಯ ಛಾಯಾಚಿತ್ರಗಳನ್ನು ತುಂಬಿಕೊಂಡಿರುವ ಸ್ಮಾರಕ ಭವನ, ವಿವಿಧ ಬಗೆಯ ಹೂವುಗಳಿಂದ ಸಿಂಗಾರಗೊಂಡು ಸ್ಮರಣೆಯ ಭಾಗವಾದವು.
ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಮಂಜುಳಾ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಆರ್.ಬಾಲರಾಜ್ ಮತ್ತು ಶ್ರೀವರ್ಧನ್ ಅವರು ಮೊದಲಿಗೆ ಸಮಾಧಿಗೆ ಪೂಜೆ ನೆರವೇರಿಸುವ ಮೂಲಕ ಗೌರವ ನಮನ ಸಲ್ಲಿಸಿದರು. ಬಳಿಕ ಕುಟುಂಬಸ್ಥರು, ರಾಜಕೀಯ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಸರದಿಯಲ್ಲಿ ಬಂದು ನಮನಸಲ್ಲಿಸುವ ಮೂಲಕ ಬಿ.ರಾಚಯ್ಯ ಮತ್ತು ಗೌರಮ್ಮ ಅವರ ಸ್ಮರಣೆ ಮಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರತಿಯೊಬ್ಬರಿಗೂ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಲಾಗಿತ್ತು. ಕುಟಂಬಸ್ಥರಾದ ತ್ರಿವೇಣಿ ಬಿ.ಬಿ.ಲಿಂಗಯ್ಯ, ಎ.ಆರ್.ಪ್ರಭ, ಉಮಾ ಪುಟ್ಟಮಾದಯ್ಯ, ರೋಷಿಣಿ, ಪ್ರದೀಪ್‌ಕುಮಾರ್ ಆಲೂರು ಮಲ್ಲಣ್ಣ ಹಾಗೂ ಇತರರು ಹಾಜರಿದ್ದರು. ಗಾಯಕರಾದ ಬಸವರಾಜು, ನಟರಾಜು ಹಾಗೂ ಸಂಗಡಿಗರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಸ್ಮರಣೆಯ ಮೆರುಗನ್ನು ಹೆಚ್ಚಿಸಿತು.
ಗಣ್ಯರಿಂದ ಗೌರವ ನಮನ:
ಬಿ,.ರಾಚಯ್ಯ ಸ್ಮಾರಕ ಭವನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ವಿವಿಧ ಕ್ಷೇತ್ರಗಳ ಗಣ್ಯರು ಗೌರವ ನಮನವನ್ನು ಸಲ್ಲಿಸಿದರು. ವಿಧಾನ ಪರಿಷತ್ ಸದಸ್ಯರಾದ ಕೆ.ಶಿವಕುಮಾರ್ ಅವರು ಭೇಟಿ ನೀಡಿ, ಸ್ಮಾರಕ ಭವನದ ಗೋಡೆಗಳಲ್ಲಿ ಅಳವಡಿಸಿರುವ ಪ್ರತಿಯೊಂದು ಛಾಯಾಚಿತ್ರ ಹಾಗೂ ಬಿ.ರಾಚಯ್ಯ ಅವರು ಬಳಸುತ್ತಿದ್ದ ವಸ್ತುಗಳನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಒಡಗೂಡಿ ವೀಕ್ಷಿಸಿದರು. ಅವರಲ್ಲದೇ ಮಾಜಿ ಸಚಿವ ಬಿ.ಬಿ.ಲಿಂಗಯ್ಯ, ನಿವೃತ್ತ ಐಪಿಎಸ್ ಅಧಿಕಾರಿ ಬೋಳಯ್ಯ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ದಲಿತ ಮುಖಂಡ ವೆಂಕಟರಮಣಸ್ವಾಮಿ(ಪಾಪು), ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಮುಖಂಡ ಅಯ್ಯನಪುರ ಶಿವಕುಮಾರ್, ಶಿವಮಲ್ಲು, ಜೆ.ಯೋಗೇಶ್, ಕೆರೆಹಳ್ಳಿ ನವೀನ್, ಕಂದಹಳ್ಳಿ ನಂಜುಂಡಸ್ವಾಮಿ, ಆಲೂರು ಪ್ರದೀಪ್, ಆರ್.ಮಹದೇವ್, ಪುಟ್ಟಸ್ವಾಮಿ ಹಾಗೂ ಇತರರು ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net