ಅಂಜುಮಾನ್ ಇ-ಇಸ್ಲಾಮಿ ಸಮಿತಿ

ಕೊಳ್ಳೇಗಾಲದ ಡಾ.ಬಿ.ಆರ್.ಅಂಬೇಡ್ಕರ ಪ್ರತಿಮೆಗೆ  ಅಂಜುಮಾನ್ ಇ-ಇಸ್ಲಾಮಿಯ ಸಮಿತಿಯ ನೂತನ ಅಧ್ಯಕ್ಷ ಅಭಿಬ್ ಪಾಷ , ಉಪಾಧ್ಯಕ್ಷ  ಆಯುಬ್ ಖಾನ್, ಕಾರ್ಯದರ್ಶಿ ಅಬ್ದುಲ್ ಖಾದರ್, ಖಜಾಂಚಿ ಅಬ್ದುಲ್ ಜಬೀವುಲ್ಲಾ ಮಾಲಾರ್ಪಣೆ ಮಾಡಿದರು.
ಕೊಳ್ಳೇಗಾಲದ ಡಾ.ಬಿ.ಆರ್.ಅಂಬೇಡ್ಕರ ಪ್ರತಿಮೆಗೆ ಅಂಜುಮಾನ್ ಇ-ಇಸ್ಲಾಮಿಯ ಸಮಿತಿಯ ನೂತನ ಅಧ್ಯಕ್ಷ ಅಭಿಬ್ ಪಾಷ , ಉಪಾಧ್ಯಕ್ಷ ಆಯುಬ್ ಖಾನ್, ಕಾರ್ಯದರ್ಶಿ ಅಬ್ದುಲ್ ಖಾದರ್, ಖಜಾಂಚಿ ಅಬ್ದುಲ್ ಜಬೀವುಲ್ಲಾ ಮಾಲಾರ್ಪಣೆ ಮಾಡಿದರು.
Published on
ಕೊಳ್ಳೇಗಾಲ : ಇಲ್ಲಿನ ಅಂಜುಮಾನ್ ಇ-ಇಸ್ಲಾಮಿ ಸಮಿತಿಯ ನೂತನ ಅಧ್ಯಕ್ಷರಾಗಿ ಅಭಿಬ್ ಪಾಷ, ಉಪಾಧ್ಯಕ್ಷರಾಗಿ ಆಯುಬ್ ಖಾನ್ ಹಾಗೂ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಆಯ್ಕೆಯಾದರೆ, ಖಜಾಂಚಿಯಾಗಿ ಅಬ್ದುಲ್ ಜಬೀವುಲ್ಲಾ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಅಂಜುಮಾನ್ ಇಸ್ಲಾಮಿಯ ಕಾಂಪ್ಲೆಕ್ಸ್‌ನಲ್ಲಿ ಬುಧವಾರ ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿ ಆಶೀಫ್ ಖಾನ್ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಖಜಾಂಚಿ ಸ್ಥಾನ ಹೊರತುಪಡಿಸಿ ಉಳಿದ ಮೂರು ಸ್ಥಾನಗಳಿಗೆ ಚುನಾವಣೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಮಹಮ್ಮದ್ ಮುಯಿಬುಲ್ಲಾ ಷರೀಫ್ ಹಾಗೂ ಅಭಿಬ್ ಪಾಷ, ಉಪಾಧ್ಯಕ್ಷ ಸ್ಥಾನಕ್ಕೆ ಮಹಮದ್ ಮತಿನ್ ಹಾಗೂ ಆಯುಬ್ ಖಾನ್, ಕಾರ್ಯದರ್ಶಿ ಸ್ಥಾನಕ್ಕೆ ಅಬ್ದುಲ್ ಖಾದರ್ ಹಾಗೂ ಜಮೀಲ್ ಪಾಷ ಅವರು ಸ್ಪರ್ಧಿಸಿದ್ದರು. ಅಂತಿಮವಾಗಿ ಅಧ್ಯಕ್ಷರಾಗಿ ಅಭಿಬ್ ಪಾಷ, ಉಪಾಧ್ಯಕ್ಷರಾಗಿ ಆಯುಬ್ ಖಾನ್ ಹಾಗೂ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆಶೀಫ್ ಖಾನ್ ಘೋಷಿಸಿದರು.
ನೂತನ ಅಧ್ಯಕ್ಷ ಅಭಿಬ್ ಪಾಷ ಮಾತನಾಡಿ, ಸಮಿತಿಯಲ್ಲಿರುವ 15 ನಿರ್ದೇಶಕರು ಸೇರಿ ಸಮುದಾಯದ ಅಭಿವೃದ್ಧಿ ಕೆಲಸ ಮಾಡುತ್ತೇವೆ. ಪ್ರಥಮವಾಗಿ ಸಮುದಾಯದ ಶಾದಿ ಮಹಲ್ ಕಟ್ಟಡವನ್ನು ಪೂರ್ಣಗೊಳಿಸುವುದರ ಜತೆಗೆ ಲೋಕಾರ್ಪಣೆ ಮಾಡಲು ಶ್ರಮಿಸಲಾಗುವುದು. ಜತೆಗೆ ಸಮುದಾಯದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಪ್ರಸ್ತುತ ಈದ್ಗಾ ಮೊಹಲ್ಲದಲ್ಲಿರುವ ಸ್ಮಶಾನ (ಖಬರ್‌ಸ್ತಾನ) ಸಾಲುವುದಿಲ್ಲ. ಹಾಲಿ ಇರುವ ಸ್ಮಶಾನವನ್ನು ಅಭಿವೃದ್ಧಿ ಪಡಿಸಿ, ಬೇರೆಡೆ ಮತ್ತೊಂದು ಸ್ಮಶಾನಕ್ಕೆ ಸ್ಥಳ ಹುಡುಕಾಟ ನಡೆಸಿ ಸಮುದಾಯಕ್ಕೆ ಕೊಡುಗೆ ನೀಡಲಾಗುವುದು. ಇದರೊಂದಿಗೆ ಸಂಸ್ಥೆಯ ಆಸ್ತಿಯನ್ನು ರಕ್ಷಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ನೂತನ ಪದಾಧಿಕಾರಿಗಳನ್ನು ಸಮುದಾಯದ ಮುಖಂಡರು ಹಾಗೂ ಯುವಕರು ಸನ್ಮಾನಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net