ವಿಸ್ಡಮ್ ಎಜುಕೇಷನ್ ಟ್ರಸ್ಟ್‌ನಿಂದ ಜಾಗೃತಿ ಜಾಥಾ

ಕೊಳ್ಳೇಗಾಲದ ವಿಸ್ಡಮ್ ಎಜುಕೇಷನ್ ಟ್ರಸ್ಟ್ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ತಾಲೂಕು ಪಂಚಾಯಿತಿ ಮುಂಭಾಗ ಪರಿಸರ ಜಾಗೃತಿ ಜಾಥಾಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಿಆರ್‌ಪಿ ಸಮೀರಾ ಚಾಲನೆ ನೀಡಿದರು. ಪೀಟರ್, ಭ್ರಮಾರಂಬಾ ಇತರರು ಇದ್ದರು.
ಕೊಳ್ಳೇಗಾಲದ ವಿಸ್ಡಮ್ ಎಜುಕೇಷನ್ ಟ್ರಸ್ಟ್ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ತಾಲೂಕು ಪಂಚಾಯಿತಿ ಮುಂಭಾಗ ಪರಿಸರ ಜಾಗೃತಿ ಜಾಥಾಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಿಆರ್‌ಪಿ ಸಮೀರಾ ಚಾಲನೆ ನೀಡಿದರು. ಪೀಟರ್, ಭ್ರಮಾರಂಬಾ ಇತರರು ಇದ್ದರು.
Published on
ಕೊಳ್ಳೇಗಾಲ: ವಿಶ್ವ ಪರಿಸರ ದಿನದ ಪ್ರಯುಕ್ತ ಪಟ್ಟಣದಲ್ಲಿ ಶುಕ್ರವಾರ ವಿಸ್ಡಮ್ ಎಜುಕೇಷನ್ ಟ್ರಸ್ಟ್ ವತಿಯಿಂದ ಜಾಗೃತಿ ಜಾಥಾ ಆಯೋಜಿಸಲಾಗಿತ್ತು.
ಪಟ್ಟಣದ ತಾಲೂಕು ಪಂಚಾಯಿತಿ ವೃತ್ತದ ಬಳಿ ಜಾಥಾ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಿ.ಆರ್.ಪಿ ಸಮೀರಾ ಚಾಲನೆ ನೀಡಿದ ಬಳಿಕ ಮಾತನಾಡಿ, ಪರಿಸರ ದಿನದಂದು ಮಾತ್ರ ಗಿಡಗಳನ್ನು ನೆಟ್ಟು ಉಳಿದ ದಿನ ಮರೆತರೆ ಪರಿಸರ ದಿನಾಚರಣೆ ಆಗುವುದಿಲ್ಲ. ನೆಟ್ಟ ಗಿಡವನ್ನು ಪ್ರತಿ ದಿನವೂ ಪೋಷಣೆ ಮಾಡಿ ಹೆಮ್ಮರವಾಗಿ ಬೆಳೆಸಬೇಕು. ಪ್ರತಿ ನಿತ್ಯ ಪರಿಸರ ದಿನವನ್ನು ಆಚರಣೆ ಮಾಡಬೇಕು. ನಾವು ಹಾಳು ಮಾಡಿರುವ ಪರಿಸರವನ್ನು ನಾವೇ ಸರಿಪಡಿಸುವ ಮೂಲಕ ಉತ್ತಮ ಪರಿಸರವನ್ನು ಸೃಷ್ಟಿ ಮಾಡಬೇಕು ಎಂದು ತಿಳಿಸಿದರು.
ಬಳಿಕ ಮಕ್ಕಳು ಪರಿಸರ ಜಾಗೃತಿ ಬರಹಗಳ ಪೋಸ್ಟರ್‌ಗಳನ್ನು ಹಿಡಿದು ಪ್ರವಾಸಿ ಮಂದಿರದ ಮುಂಭಾಗದ ಹೆದ್ದಾರಿ ರಸ್ತೆಯಲ್ಲಿ ಸಾಗಿ ನ್ಯಾಯಾಲಯದ ಮುಂಭಾಗದಲ್ಲಿ ವಾಯು ಮಾಲಿನ್ಯ ತಡೆಗಟ್ಟುವಿಕೆ ಗಿಡ-ಮರ ಉಳಿಸುವ ಬಗ್ಗೆ ಅರಿವು ಮೂಡಿಸುವ ನೃತ್ಯ ಪ್ರದರ್ಶನ ನೀಡಿದರು. ನಂತರ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ತಡೆಗಟ್ಟುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ನಾಟಕ ಪ್ರದರ್ಶಿಸಿದರು.
ಪೀಪಲ್ ಫಾರ್ ವೈಲ್ಡ್‌ಲೈಫ್ ಕನ್ಸರ್‌ವೇಷನ್ ಕರ್ನಾಟಕ ಸಂಸ್ಥೆ ಅಧ್ಯಕ್ಷ ಜಾನ್ ಪೀಟರ್, ಅರಣ್ಯ ಇಲಾಖೆಯ ಡಿಆರ್‌ಎಫ್‌ಒ ಸಾಲನ್, ಶಾಲೆಯ ಮುಖ್ಯಶಿಕ್ಷಕಿ ಭ್ರಮಾರಂಭ ಹಾಗೂ ಸಹ ಶಿಕ್ಷಕರು, ಮಕ್ಕಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net