ಬೆಂಕಿಯಿಂದ ಕಾಡನ್ನು ರಕ್ಷಿಸುವ ಅರಿವು ಕಾರ್ಯಕ್ರಮ

ಬೆಂಕಿಯಿಂದ ಕಾಡನ್ನು ರಕ್ಷಿಸುವ ಅರಿವು ಕಾರ್ಯಕ್ರಮ
ಬೆಂಕಿಯಿಂದ ಕಾಡನ್ನು ರಕ್ಷಿಸುವ ಅರಿವು ಕಾರ್ಯಕ್ರಮ
Published on

ಪ್ರಮುಖ ಮುಖ್ಯಾಂಶಗಳು

  • ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲೋನಿ ಗ್ರಾಮದಲ್ಲಿ ಆಯೋಜನೆ
  • ಅರಣ್ಯ ಇಲಾಖೆ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಸಹಯೋಗ
  • ಸಾರ್ವಜನಿಕರಲ್ಲಿ ಅರಣ್ಯ ಬೆಂಕಿ ಸಂಬಂಧ ಜಾಗೃತಿ
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲೋನಿ ಗ್ರಾಮದಲ್ಲಿ ಬುಧವಾರ ಕಾಡು ಮತ್ತು ಕಾಡಂಚಿನ ಗ್ರಾಮಗಳಲ್ಲಿ ಬೆಂಕಿಯಿಂದ ಕಾಡನ್ನು ರಕ್ಷಿಸುವ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಅರಣ್ಯ ಇಲಾಖೆ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಶ್ರೀಸಾಯಿ ಪ್ರಗತಿ ೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಬಂಡಿಪುರ ಅರಣ್ಯ ಪ್ರದೇಶದ ಮದ್ದೂರು ವಲಯ ಅರಣ್ಯಾಧಿಕಾರಿ ಪುನೀತ್ ಅವರು ಆದಿವಾಸಿಗಳ ಸಂಪ್ರದಾಯದ ಮೂಲಕ ಮರಕ್ಕೆ ನೀರು ಹಾಕಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಈ ಜಾಗೃತಿ ಕಾರ್ಯಕ್ರಮವನ್ನು ಬಂಡಿಪುರ ಅರಣ್ಯ ಪ್ರದೇಶದ ಕುಂದಕೆರೆ ಅರಣ್ಯ ವಲಯದಿಂದ ಗುಂಡರೆ ಅರಣ್ಯ ವಲಯದವರೆಗೂ ಹಮ್ಮಿಕೊಳ್ಳಲಾಗಿದ್ದು, ಈ ಮೂಲಕ ಸಾರ್ವಜನಿಕರಲ್ಲಿ ಅರಣ್ಯ ಬೆಂಕಿ ಸಂಬಂಧ ಜಾಗೃತಿ ಮೂಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಜಾಥಾ ಮತ್ತು ಕಿರು ನಾಟಕವನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಗಿರಿಜನ ಪ್ರಗತಿ ಫೌಂಡೇಶನ್ ಅಧ್ಯಕ್ಷೆ ಡಾ.ಎಸ್. ರತ್ನಮ್ಮ, ಪರಿಸರ ಸಮಿತಿ ಅಧ್ಯಕ್ಷ ವಾಧು, ಊರಿನ ಮುಖಂಡರಾದ ನಾಗರಾಜು, ರಾಜು, ಶಿವಮ್ಮ, ಮಂಜುಳ, ಶಾರದಾ, ಲಯನ ಮತ್ತು ತಂಡದವರು, ಮದ್ದೂರು ವಲಯದ ಅರಣ್ಯ ಸಿಬ್ಬಂದಿಗಳು ಮತ್ತು ಜಾನಪದ ಕಲಾವಿದರಾದ ಎಸ್.ಗುರುರಾಜು, ಎಂ.ಕೆ.ಮನೋಜ್ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net