ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

ಕೊಳ್ಳೇಗಾಲದ ವಿಸ್ಡಮ್ ಎಜುಕೇಷನಲ್ ಸ್ಕೂಲ್ ವಿದ್ಯಾರ್ಥಿಗಳು ಹತ್ತನೇ ತರಗತಿಯ (ಸಿಬಿಎಸ್‌ಸಿ ಬೋರ್ಡ್) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಗುರುವಾರ ಆಡಳಿತ ಮಂಡಳಿ ಸನ್ಮಾನಿಸಿತು. ಮಧು ಮಲ್ಲೇಶ್, ಭ್ರಮರಾಂಬಾ ಇತರರಿದ್ದರು.

Published on
ಕೊಳ್ಳೇಗಾಲ: ಹತ್ತನೇ ತರಗತಿಯ (ಸಿಬಿಎಸ್‌ಸಿ ಬೋರ್ಡ್) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿತಂದ ವಿದ್ಯಾರ್ಥಿಗಳನ್ನು ಗುರುವಾರ ಪಟ್ಟಣದ ವಿಸ್ಡಮ್ ಎಜುಕೇಷನಲ್ ಸ್ಕೂಲ್‌ನ ಆಡಳಿತ ಮಂಡಳಿ ಸನ್ಮಾನಿಸಿ ಪುರಸ್ಕರಿಸಿದೆ.
ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಟಾಪರ್‌ಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದೆ. ಈ ವೇಳೆ ಶಾಲಾ ಟ್ರಸ್ಟಿ ಮಧು ಮಲ್ಲೇಶ್ ಮಾತನಾಡಿ, ಈ ಸಾಧನೆಯು ಜೀವನದ ಪ್ರಯಾಣದಲ್ಲಿ ಆರಂಭವಾಗಿದೆ. ಮುಂದಿನ ಶಿಕ್ಷಣದಲ್ಲೂ ಮಕ್ಕಳು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕು. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲೆಂದು ಹಾರೈಸಿದರು.
ಶಾಲೆಯ ಪ್ರಾಂಶುಪಾಲೆ ಭ್ರಮರಾಂಬಾ, ಶಿಕ್ಷಕರು, ಸಿಬ್ಬಂದಿ ವರ್ಗ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net