ತಾಲೂಕಿನ ಮುಳ್ಳೂರು ಗ್ರಾಮದ ಕೂಲಿ ಕಾರ್ಮಿಕ ಮಹೇಶ್ ಹಲ್ಲೆಗೊಳಗಾದ ಯುವಕ. ಅದೇ ಗ್ರಾಮದ ಮಂಜುನಾಥ್, ಶಶಾಂಕ್, ನಿಶಾಂತ್, ನಂದೀಶ, ಗಣೇಶ್ ಪ್ರಸಾದ್, ರಾಹುಲ್ ಆರೋಪಿಗಳಾಗಿದ್ದಾರೆ. ಹಣಕಾಸು ವಿಚಾರವಾಗಿ ಕೊಳ್ಳೇಗಾಲದ ಆರ್‌ಎಂಸಿ ಬಳಿಗೆ ಮಂಜುನಾಥ್ ನನ್ನನ್ನು ಕರೆಸಿಕೊಂಡು ಬ್ಲೇಡ್‌ನಿಂದ ಹಲ್ಲೆ ಮಾಡಿದ್ದಾನೆ. ನಂತರ ಶಶಾಂಕ್, ನಿಶಾಂತ್ ಎಂಬುವರು ಆಸ್ಪತ್ರೆ ಬಳಿ ಬಂದು ನೀನು ದೂರು ಕೊಡುವುದು ಬೇಡ, ಈ ವಿಚಾರವನ್ನು ಬಗೆಹರಿಸಿಕೊಳ್ಳೋಣ ಎಂದು ತಿಮ್ಮರಾಜೀಪುರ ಕಡೆಗೆ ನನ್ನನ್ನು ಕರೆದೊಯ್ಯುವಾಗ ನಂದೀಶ್, ಗಣೇಶ್, ರಾಹುಲ್ ಹಿಂಬಾಲಿಸಿಕೊಂಡು ಬಂದು ಒಗ್ಗೂಡಿದರು. ನಾನು ಅನುಮಾನಗೊಂಡು ಪ್ರಶ್ನಿಸಿದ್ದಕ್ಕೆ ಕೆಳಕ್ಕೆ ಕೆಡವಿ, ತಲೆಗೆ ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಅಲ್ಲದೆ ಮಂಜುನಾಥ್ ನನಗೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರು ನೀಡಿದ್ದಾನೆ.