ಗುಂಡ್ಲುಪೇಟೆ: ಪಟ್ಟಣದ ಮನೆಯೊಂದರಲ್ಲಿ ಹಾಡಹಗಲೇ ಮನೆಗಳ್ಳತನ ಮಾಡಿದ್ದ ಆರೋಪಿಯನ್ನು ಪಟ್ಟಣ ಠಾಣೆಯ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಪಟ್ಟಣದ ಚಿಕ್ಕಮಾಂಸದ ಅಂಗಡಿ ಬೀದಿ ನಿವಾಸಿ ಈಶ್ವರ(ಈಶ-ಶಿವ) ಬಂಧಿತ ಆರೋಪಿ.
ಜು. 14ರಂದು ಪಟ್ಟಣದ ಕೆ.ಎಸ್.ನಾಗರತ್ನಮ್ಮ ಬಡಾವಣೆಯ ಚಂದನ್ ಅವರ ಮನೆಯ ಬಾಗಿಲ ಬೀಗ ಮುರಿದು 32 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಎಸ್ಪಿ ಮುತ್ತುರಾಜ್ ನಿರ್ದೇಶನದ ಮೇರೆಗೆ ಸರ್ಕಲ್ ಇನ್‌ಸ್ಪೆಕ್ಟರ್ ಎನ್.ಜಯಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಈಶ್ವರನನ್ನು ಬಂಧಿಸಿ, ಮಾಲನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಶಿವಕುಮಾರ್, ಸುಖೇಶ್, ಸುನೀಲ್, ನಾಗಮ್ಮ, ವೆಂಕಟೇಶ್, ಶಂಕರರಾಜ್ ಇದ್ದರು.