ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳ ನೇಮಕ

ಚಾಮರಾಜನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ  ಬಿಜೆಪಿ ರೈತ ಮೋರ್ಚಾದ ನೂತನ ಪದಾಧಿಕಾರಿಗಳಿಗೆ  ಮಂಗಳವಾರ ಆದೇಶ ಪತ್ರ ವಿತರಿಸಲಾಯಿತು. ಬೇಡರಪುರ ಬಸವಣ್ಣ, ಹೊನ್ನೂರು ಮಹದೇವಸ್ವಾಮಿ, ಶಿವಕುಮಾರ್ ಬೂದಿತಿಟ್ಟು, ಹೊನ್ನಹಳ್ಳಿ ಆರ್.ಪುರುಷೋತ್ತಮ್,  ಕೊಮಾರನಪುರ ಚಂದ್ರಶೇಖರ್ ಮತ್ತು ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪಕ್ಷದ ಕಚೇರಿಯಲ್ಲಿ ನೇಮಕ ಪತ್ರ ವಿತರಣೆ
  • ಮೋರ್ಚಾ ಅಧ್ಯಕ್ಷ ಬೇಡರಪುರ ಬಸವಣ್ಣ ಭಾಗಿ
ಚಾಮರಾಜನಗರ: ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರೈತ ಮೋರ್ಚಾದ ನೂತನ ಪದಾಧಿಕಾರಿಗಳನ್ನು ಮಂಗಳವಾರ ನೇಮಕ ಮಾಡಿ ಮೋರ್ಚಾ ಅಧ್ಯಕ್ಷ ಬೇಡರಪುರ ಬಸವಣ್ಣ ಆದೇಶ ಪತ್ರ ವಿತರಿಸಿದರು.
ಪ್ರಧಾನ ಕಾರ್ಯದರ್ಶಿಗಳಾಗಿ ಹೊನ್ನಹಳ್ಳಿ ಆರ್.ಪುರುಷೋತ್ತಮ್, ಕೊಮಾರನಪುರ ಚಂದ್ರಶೇಖರ್, ಉಪಾಧ್ಯಕ್ಷರಾಗಿ ಜ್ಯೋತಿಗೌಡನಪುರದ ಜಿ.ಪಿ. ದೊರೆಸ್ವಾಮಿ, ಉಡಿಗಾಲ ಚಂದ್ರಶೇಖರಪ್ಪ, ಯಾನಗಹಳ್ಳಿ ಎಂ. ಮಹದೇವಸ್ವಾಮಿ, ದೇವರಹಳ್ಳಿ ಎಲ್. ಮಹೇಶ್. ಶಾಗ್ಯ ಜಿ.ರಾಚಪ್ಪ ಅವರನ್ನು ನೇಮಕ ಮಾಡಲಾಯಿತು.
ಕಾರ್ಯದರ್ಶಿಗಳಾಗಿ ಮರಿಯಾಲ ಮಹೇಶ್, ರಾಮಾಪುರ, ನವೀನ್, ಮಾದಾಪುರ ಪುಟ್ಟನಂಜಪ್ಪ, ಇಕ್ಕಡಹಳ್ಳಿ ಬಸವಣ್ಣ, ಅಟ್ಟುಗೂಲಿಪುರ ಮಹೇಶ್‌ಕುಮಾರ್ ಹಾಗೂ ಖಜಾಂಚಿಯಾಗಿ ಕಿಲಗೆರೆ ಡಿ.ಶ್ರೀಕಂಠಪ್ಪ ಅವರನ್ನು ನೇಮಕ ಮಾಡಲಾಯಿತು. ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನೂರು ಮಹದೇವಸ್ವಾಮಿ, ರೈತ ಮೋರ್ಚಾ ಪ್ರಭಾರಿ ಶಿವಕುಮಾರ್ ಬೂದಿತಿಟ್ಟು,ಮತ್ತು ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net