ಲಘು ವಿಮಾನ ಹಾರಾಟದಿಂದ ಆತಂಕ ಹೆಚ್ಚಳ

ಹನೂರಿನಲ್ಲಿ ಶನಿವಾರ ತಳಮಟ್ಟದಲ್ಲೇ ಹಾರಾಡಿದ ಲಘು ವಿಮಾನ
ಹನೂರಿನಲ್ಲಿ ಶನಿವಾರ ತಳಮಟ್ಟದಲ್ಲೇ ಹಾರಾಡಿದ ಲಘು ವಿಮಾನ
Published on
ಹನೂರು: ತಾಲೂಕಿನ ಕೆಲವು ಕಡೆಗಳಲ್ಲಿ ಒಂದು ವಾರದಿಂದ ಆಗಾಗ್ಗೆ ಲಘು ವಿಮಾನವೊಂದು ತಳಮಟ್ಟದಲ್ಲಿ ಹಾರಾಡುತ್ತಿದ್ದು, ಜನರಲ್ಲಿ ಆತಂಕ ವ್ಯಕ್ತವಾಗಿದೆ.
ಹನೂರು ಭಾಗದಲ್ಲಿ ಈವರೆಗೂ ಲಘು ವಿಮಾನ ತಳ ಮಟ್ಟದಲ್ಲಿ ಹಾರಾಟ ನಡೆಸಿಲ್ಲ. ಆದರೆ ಕಳೆದ ಒಂದು ವಾರದಿಂದ ಪಟ್ಟಣ ಸೇರಿದಂತೆ ತಾಲೂಕಿನ ಭೈರನತ್ತ, ಗುಳ್ಯ, ಮರಿಯಮಂಗಲ, ದಂಟಳ್ಳಿ, ಹಾವಿನಮೂಲೆ ಹಾಗೂ ಇತರ ಗ್ರಾಮಗಳಲ್ಲಿ ತಳ ಮಟ್ಟದಲ್ಲಿಯೇ ಲಘು ವಿಮಾನವೊಂದು ಹಾರಾಡುತ್ತಿದೆ. ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಕೆಲವರು ಈ ಭಾಗದಲ್ಲಿ ಯೋಜನೆಯೊಂದನ್ನು ರೂಪಿಸುವ ಸಂಬಂಧ ಸರ್ವೇ ಕಾರ್ಯ ನಡೆಸಲಾಗುತ್ತಿದೆ ಎಂದು ಹೇಳಿದರೆ, ಇನ್ನೂ ಕೆಲವರು ಈ ಬಗ್ಗೆ ಕುತೂಹಲದ ಜತೆಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ.
ಇತ್ತ ಲಘು ವಿಮಾನ ತಳ ಮಟ್ಟದಲ್ಲೇ ಹಾರಾಡುತ್ತಿರುವ ಬಗ್ಗೆ ಅಧಿಕಾರಿಗಳಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಇದರಿಂದ ನಿತ್ಯ ಹಾರಾಡುತ್ತಿರುವ ಲಘು ವಿಮಾನದ ಬಗ್ಗೆ ಜನರಲ್ಲಿ ಆತಂಕದ ಜತೆಗೆ ಕುತೂಹಲ ಉಂಟು ಮಾಡಿದೆ.
.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net