ನವೀನ ಮಾದರಿ ಕಲಿಕೆಗೆ ರಹದಾರಿ..: ಬ್ಲಾಗ್‌ನಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ನವೀನ ಮಾದರಿಗಳನ್ನು ಅಳಡಿಸಲಾಗಿದೆ. ಅದರಲ್ಲೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಚಟುವಟಿಕೆಗೆ ಇಳಿಸುತ್ತಿದೆ. ಬ್ಲಾಗ್‌ನಲ್ಲಿರುವ ಎಸ್‌ಎಸ್‌ಎಲ್‌ಸಿ ಕಾರ್ನರ್ ವಿಭಾಗದಲ್ಲಿ ವಿವಿಧ ವಿಷಯಗಳಡಿ ಹಿಂದಿನ ಪ್ರಶ್ನೆ ಪತ್ರಿಕೆಗಳ ಆಧಾರದ ತಯಾರಿಸಿದ ರಸಪ್ರಶ್ನೆಗಳಿವೆ. ಪಠ್ಯ ಆಧಾರಿತ ಪರೀಕ್ಷೆ ವಿಭಾಗದಲ್ಲಿ 8, 9, 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ವಿದ್ಯಾರ್ಥಿಗಳು ಈ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಮೂಲಕ ಕ್ರಿಯಾಶೀಲ ಮತ್ತು ಕಲಿಕೆ ಮತ್ತು ಸ್ವಯಂ ಮೌಲ್ಯ ಮಾಪನವನ್ನು ಮಾಡಿಕೊಳ್ಳಬಹುದಾಗಿದೆ. ಪಠ್ಯೇತರ ಚಟುವಟಿಕೆ ಮತ್ತು ಶಿಕ್ಷಣ ಇಲಾಖೆಯ ವೆಬ್ ಸೈಟ್ ಲಿಂಕ್‌ಗಳು, ಎಸ್‌ಡಿಎಂಸಿ ಮತ್ತು ಶಿಕ್ಷಕರ ವಿವರ, ಶಾಲೆಯಲ್ಲಿ ಆಯೋಜಿಸುವ ಕಾರ್ಯಕ್ರಮಗಳ ವಿವರವನ್ನು ಬ್ಲಾಗ್‌ನಲ್ಲಿ ಅಳವಡಿಸಲಾಗಿದೆ.