ಶಿವನಸಮುದ್ರ ದೇಗುಲಗಳ ಹುಂಡಿ ಎಣಿಕೆ

ತಾಲೂಕಿನ ಮಧ್ಯರಂಗನಾಥ ಸ್ವಾಮಿ ದೇವಾಲಯದಲ್ಲಿ ಮಂಳವಾರ ಶಿವನಸಮುದ್ರ ಸಮೂಹ ದೇವಾಲಯಗಳ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿರುವುದು.
ತಾಲೂಕಿನ ಮಧ್ಯರಂಗನಾಥ ಸ್ವಾಮಿ ದೇವಾಲಯದಲ್ಲಿ ಮಂಳವಾರ ಶಿವನಸಮುದ್ರ ಸಮೂಹ ದೇವಾಲಯಗಳ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿರುವುದು.
Published on
ಕೊಳ್ಳೇಗಾಲ : ತಾಲೂಕಿನ ಶಿವನಸಮುದ್ರ ಸಮೂಹ ದೇವಾಲಯಗಳ ಹುಂಡಿ ಎಣಿಕೆ ಕಾರ್ಯ ಮಂಗಳವಾರ ನಡೆದಿದ್ದು ಒಟ್ಟು 13,90,190 ರೂ. ಸಂಗ್ರಹವಾಗಿದೆ.
ಶ್ರೀ ಮಧ್ಯ ರಂಗನಾಥಸ್ವಾಮಿ ದೇವಸ್ಥಾನ, ಮೀನಾಕ್ಷಿ ದೇವಸ್ಥಾನ ಹಾಗೂ ಆದಿಶಕ್ತಿ ಮಾರಮ್ಮ ದೇವಸ್ಥಾನಗಳ ಹುಂಡಿಗಳ ಏಣಿಕೆ ಕಾರ್ಯ ಕಳೆದ ಮೂರು ತಿಂಗಳ ಅವಧಿ ಬಳಿಕ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಆದೇಶದಂತೆ ಎಣಿಕೆ ಕಾರ್ಯ ತಹಸೀಲ್ದಾರ್ ಬಸವರಾಜು ಅವರ ಉಪಸ್ಥಿತಿಯಲ್ಲಿ ನಡೆಯಿತು.
ಎಣಿಕೆಯ ಹಣವನ್ನು ಕೋಟೆಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಜಮಾ ಮಾಡಲಾಯಿತು. ಇಂದಿನ ಹುಂಡಿ ಎಣಿಕೆ ಕಾರ್ಯದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್, ಉಪತಹಸೀಲ್ದಾರ್ ವಿಜಯಕುಮಾರ್, ಕಂದಾಯ ನಿರೀಕ್ಷಕ ರಂಗಸ್ವಾಮಿ, ಶಾಂತರಾಜು, ರಾಕೇಶ್ ಮರಾಠ, ಸತೀಶ್, ಹೇಮಾ, ಪ್ರದೀಪ, ಮಹೇಶ್, ಕುಮಾರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net