ಅಂಬೇಡ್ಕರ್ ಚಿಂತನೆಗಳು ಜಗತ್ತಿಗೆ ಉಪಯುಕ್ತ

ಚಾಮರಾಜನಗರದ ನಗರದ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು. ಮಹೇಶ್ ಕುದರ್, ಉಮೇಶ್ ಕುದರ್, ಮುಖಂಡ ಮಂಜುನಾಥ್ ಕುದರ್, ದಿಲೀಪ್ ಕುದರ್, ಶ್ರೀನಿಧಿ ಕುದರ್, ಬಿ.ಪಿ.ಶ್ರೀನಿವಾಸ್, ಡಾ.ನೀಲಾದೇವಿ, ನಾಗಶಿಲ್ಪ ಉಮೇಶ್,ಕುಮುದಾ ಕೇಶವಮೂರ್ತಿ ಇತರರು ಇದ್ದರು.
ಚಾಮರಾಜನಗರದ ನಗರದ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು. ಮಹೇಶ್ ಕುದರ್, ಉಮೇಶ್ ಕುದರ್, ಮುಖಂಡ ಮಂಜುನಾಥ್ ಕುದರ್, ದಿಲೀಪ್ ಕುದರ್, ಶ್ರೀನಿಧಿ ಕುದರ್, ಬಿ.ಪಿ.ಶ್ರೀನಿವಾಸ್, ಡಾ.ನೀಲಾದೇವಿ, ನಾಗಶಿಲ್ಪ ಉಮೇಶ್,ಕುಮುದಾ ಕೇಶವಮೂರ್ತಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯುವ ಮುಖಂಡ ಹಾಗೂ ಉದ್ಯಮಿ ಮಹೇಶ್ ಕುದರ್ ಬಣ್ಣನೆ
  • ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ
ಚಾಮರಾಜನಗರ: ಬುದ್ಧರ ಬಂಧುತ್ವವನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳು ಜಗತ್ತಿಗೆ ಉಪಯುಕ್ತವಾಗಿದೆ ಎಂದು ಯುವ ಉದ್ಯಮಿ ಮಹೇಶ್ ಕುದರ್ ತಿಳಿಸಿದರು.
ನಗರದ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಹಾಗೂ ನಗರಸಭಾ ಮಾಜಿ ಅಧ್ಯಕ್ಷ ಎಸ್.ನಂಜುಂಡಸ್ವಾಮಿ ಅವರ 82 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಂವಿಧಾನದ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರತಿಯೊಬ್ಬರ ಬದುಕನ್ನು ಹಸನುಗೊಳಿಸಿದ್ದಾರೆ. ಅವರು ಮಹಿಳೆಯರಿಗೆ ರಾಜಕೀಯ ಅಧಿಕಾರವನ್ನು ದೊರಕಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬ ಪ್ರಜೆಗಳಿಗೂ ಹಲವಾರು ಹಕ್ಕು ಅಧಿಕಾರಗಳನ್ನು ದೊರಕಿಸಿಕೊಟ್ಟಿದ್ದಾರೆ. ಅವರ ತತ್ವ, ಚಿಂತನೆಗಳು ಜಗತ್ತಿಗೆ ಪ್ರೇರಕ ಶಕ್ತಿಯಾಗಿದೆ. ನಾವೆಲ್ಲರೂ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಪ್ರಸ್ತುತ ಜಗತ್ತಿನಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಜಗತ್ತಿನಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಗಳು ಜಗತ್ತಿಗೆ ಉಪಯುಕ್ತವಾಗಿದೆ. ಈ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದರು.
ಯುವ ಮುಖಂಡ ಎಸ್.ಪ್ರಶಾಂತ್ ಮಾತನಾಡಿ, ಕಳೆದ ಐದು ವರ್ಷಗಳಿಂದ ಹೌಸಿಂಗ್ ಬೋರ್ಡ್ ಉದ್ಯಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತಿದೆ. ಅದರಂತೆ ಈ ವರ್ಷವೂ ಅರ್ಥಪೂರ್ಣವಾಗಿ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರಸ್ತುತ ಜಗತ್ತಿನಲ್ಲಿ ಶಾಂತಿ ನೆಲೆಸಲು ಅಂಬೇಡ್ಕರ್ ಚಿಂತನೆಗಳು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾ ಅಧ್ಯಕ್ಷ ಉಮೇಶ್ ಕುದರ್, ಮುಖಂಡ ಮಂಜುನಾಥ್ ಕುದರ್, ದಿಲೀಪ್ ಕುದರ್, ಶ್ರೀನಿಧಿ ಕುದರ್, ಬಿ.ಪಿ.ಶ್ರೀನಿವಾಸ್, ಡಾ.ನೀಲಾದೇವಿ, ನಾಗಶಿಲ್ಪ ಉಮೇಶ್, ನಗರಸಭಾ ಮಾಜಿ ಸದಸ್ಯೆ ಕುಮುದಾ ಕೇಶವಮೂರ್ತಿ, ಶಿಕ್ಷಕ ಮಹದೇವಯ್ಯ, ಸುರೇಶ್ ನಾಯಕ್, ಚಂದ್ರಶೇಖರ್, ಜಗದೀಶ್ ಉತ್ತುವಳ್ಳಿ, ಡಾ.ಅಜಯ್ ಕುಮಾರ್, ಕಮಲ್ ರಾಜ್, ಎಎಸ್‌ಐ ಶಿವಣ್ಣ, ವಕೀಲ ಮಲ್ಲಿಕ್, ರವಿಕುಮಾರ್ ಹಾಗೂ ಹೌಸಿಂಗ್ ಬೋರ್ಡ್ ನಿವಾಸಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net