ಕೆಸ್ತೂರು ಗ್ರಾಮದಲ್ಲಿ ಸಂಭ್ರಮದ ಅಂಬೇಡ್ಕರ್ ಜಯಂತಿ

ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.
ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.
Published on
ಯಳಂದೂರು: ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಅಂಬೇಡ್ಕರ್ ಅವರ 135ನೇ ಜನ್ಮ ದಿನವನ್ನು ಗ್ರಾಮದ ಯಜಮಾನರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದಿಂದ ಆಚರಿಸಲಾಯಿತು.
ಅಂಬೇಡ್ಕರ್ ಭಾವಚಿತ್ರಕ್ಕೆ ಗ್ರಾಮದ ಯಜಮಾನರು ಮುಖಂಡರು ಪುಷ್ಪನಮನ ಸಲ್ಲಿಸಿದರು. ನಂತರ ಮೆರವಣಿಗೆಗೆೆ ಚಾಲನೆ ದೊರೆಯಿತು. ಅಂಬೇಡ್ಕರ್ ಭಾವಚಿತ್ರವಿರುವ ಮಂಟಪವನ್ನು ವಿವಿಧ ಹೂ ಹಾಗೂ ನೀಲಿ ಬಣ್ಣದ ಶಾಲುಗಳಿಂದ ಸಿಂಗರಿಸಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಡೊಳ್ಳು, ನಗಾರಿ, ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಯಿತು.
ಗ್ರಾಮದ ಯಜಮಾನರು, ಮುಖಂಡರು, ಯುವಕರು ಬಿಳಿ ಬಟ್ಟೆ- ನೀಲಿ ಶಾಲುಗಳನ್ನು ಧರಿಸಿ ಅಂಬೇಡ್ಕರ್ ಪರ ಘೋಷಣೆ ಕೂಗಿದರು ನಂತರ ಮಾರಿಕುಣಿತಕ್ಕೆ ಹೆಜ್ಜೆ ಹಾಕಿದರು. ಬಿಸಲಿನ ಹಿನ್ನೆಲೆಯಲ್ಲಿ ಅಲ್ಲಲ್ಲಿ ನೀರು, ಮಜ್ಜಿಗೆ, ಪಾನಕ ವಿತರಿಸಲಾಯಿತು. ಇನ್ನೂ ಕೆಲ ಯುವಕರು ಬಿರಿಯಾನಿ ವ್ಯವಸ್ಥೆ ಮಾಡಿದ್ದರು. ವಿವಿಧ ಜನಾಂಗದ ಮುಖಂಡರು ಅಂಬೇಡ್ಕರ್ ಭಾವಚಿತ್ರಕ್ಕೆ ಹೂವಿನಹಾರ ಹಾಕಿ ಗೌರವಿಸಿದರು.
ಅನ್ನ ಸಂತರ್ಪಣೆ: ಬುಧವಾರ ಅಂಬೇಡ್ಕರ್ ಜಯಂತಿ ಪ್ರಯುಕ್ತ ಸುಮಾರು 3000 ಸಾವಿರ ಜನಕ್ಕೆ ಅನ್ನಸಂತರ್ಪನೆ ಏರ್ಪಡಿಸಲಾಗಿತ್ತು. ಗ್ರಾಮದ ದಾನಿಗಳೇ ಸೇರಿ ಈ ಕಾರ್ಯವನ್ನು ಆಯೋಜಿಸಿದ್ದರು. ಮಧ್ಯಾಹ್ನ 1 ಗಂಟೆಯಿಂದ ಸಂಜೆವರೆಗೂ ಊಟ ನಡೆಯಿತು.
ಗ್ರಾಮದ ಯಜಮಾನರಾದ ಕುಮಾರ್ ಬಸವಣ್ಣ, ಸಿದ್ದರಾಜು, ಬಸವರಾಜು, ಮುಖಂಡರಾದ ಬಿ.ನಾಗರಾಜು, ದೊರೆಸ್ವಾಮಿ, ಎಂ.ನಾಗರಾಜು, ರಾಮಕೃಷ್ಣ, ಮಧು, ಚಿನ್ನಸ್ವಾಮಿ, ಜಯರಾಜ್, ಕೆ.ಎಂ.ಶಿವಣ್ಣ, ರಾಜ್, ಗುರುಲಿಂಗಯ್ಯ, ಪ್ರಸಾದ್, ಮಂಟಯ್ಯ, ಅಂಬೇಡ್ಕರ್ ಸಂಘದ ಅಧ್ಯಕ್ಷ ಸಚಿನ್, ಸಂಜಯ್ ಕುಮಾರ್ ಎನ್.ಕಿರಣ್, ಜೆ.ಸಂದೀಪ್, ಎಸ್.ನವೀನ್, ನಾರಾಯಣ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net