ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ವತಿಯಿಂದ ಆಯೋಜಿಸಿರುವ ರಾಜ್ಯ ಮಟ್ಟದ ಕೃಷಿ ಮೇಳ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕೊಳ್ಳೇಗಾಲ ಮಾಜಿ ಶಾಸಕ ಎನ್.ಮಹೇಶ್ ಚಾಲನೆ ನೀಡಿದರು. ವೆಂಕಟರಮಣಸ್ವಾಮಿ, ಸಿ.ಎಂ.ನರಸಿಂಹಮೂರ್ತಿ, ವೀರಣ್ಣ ಇದ್ದರು.
ಮೈಸೂರು: ದೇಶದ ಆರ್ಥಿಕ ಬುನಾದಿ ಕೃಷಿಗೆ ಪ್ರೋತ್ಸಾಹ ನೀಡಲು 3 ದಿನಗಳ ರಾಜ್ಯ ಮಟ್ಟದ ಕೃಷಿ ಮೇಳ ವನ್ನು ಆಯೋಜಿಸಿರುವುದು ಮಾಧ್ಯಮ ಕ್ಷೇತ್ರಕ್ಕೆ ಮಾದರಿಯಾಗಿದೆ ಎಂದು ಮಾಜಿ ಸಚಿವ ಎನ್. ಮಹೇಶ್ ಅಭಿಪ್ರಾಯಪಟ್ಟರು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ವತಿಯಿಂದ ಆಯೋಜಿಸಿರುವ ರಾಜ್ಯ ಮಟ್ಟದ ಕೃಷಿ ಮೇಳ ಎರಡನೇ ದಿನದ ಸಾಂಸ್ಕೃತಿಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೃಷಿ ಪ್ರಧಾನ ಸಮಾಜ ನಮ್ಮದು, ಕೃಷಿ ಕ್ಷೇತ್ರ ಉತ್ತಮವಾಗಿದ್ದರೆ ಕೈಗಾರಿಕೆ, ವಾಣಿಜ್ಯ, ವ್ಯಾ ಪಾರ, ವ್ಯವಹಾರ ಎಲ್ಲ ಕ್ಷೇತ್ರಗಳು ಸುಸ್ಥಿರವಾಗಿ ರುತ್ತದೆ. 21ನೇ ಶತಮಾನದ ಜಾಗತಿಕ ಯುಗ ದಲ್ಲಿ ಉತ್ಸಾಹಿ ಕೃಷಿಕರಿಗೆ ಪ್ರೇರಣಿ ನೀಡುವ ನಿಟ್ಟಿನಲ್ಲಿ ಕೃಷಿ ಮೇಳ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಈ ನೆಲದ ಅಸ್ಮಿತೆ ಜಾನಪದ, ತತ್ವ ಪದವನ್ನು ತಮ್ಮ ಸಾಂಸ್ಕೃತಿಕ ವೇದಿಕೆ ಕಾರ್ಯಕ್ರಮಗಳಲ್ಲಿ ಖ್ಯಾತ ಗಾಯಕರಿಂದ ನಡೆಸುತ್ತಿರುವುದು ನಿಜಕ್ಕೂ ಪ್ರಸಂಶಿಸುವ ಸಂಗತಿಯಾಗಿದೆ. ರೈತ ಕುಲಕ್ಕೆ ಒಳ್ಳೇಯದಾಗಲಿ, ರೈತರ ಬಾಳು ಅಸ ನಾಗಲಿ ಎಂದು ಹಾರೈಸಿದರು.
ಗಾಯಕ ರವಿ ಸಂತು ಮಾತನಾಡಿ, ರೈತರು ಎಂದರೆ ವಿಜಯವಾಣಿ ದಿನಪತ್ರಿಕೆಗೆ ಅಪಾರ ಗೌರವವಿದೆ ಎಂಬುದಕ್ಕೆ ಈ ಬೃಹತ್ ಕೃಷಿ ಮೇಳವೇ ಸಾಕ್ಷಿಯಾಗಿದೆ. ಜನರಿಗೆ ಪ್ರಪಂಚದ ದಿನ ನಿತ್ಯದ ವಿದ್ಯಾಮಾನಗಳನ್ನು ಸುದ್ದಿಗಳ ಮೂಲಕ ಬಿತ್ತರಿಸುವ ಜತೆಗೆ ಸಮಾಜಮುಖಿ ಕಾರ್ಯಗಳಲ್ಲಿ ಪತ್ರಿಕೆ ತೊಡಗಿಸಿಕೊಂಡಿದೆ ಎಂದರು.
ವೇದಿಕೆಯಲ್ಲಿ ಗಾಯಕ ರವಿ ಸಂತು ಬಳಗ ಮತ್ತು ಜಾನಪದ ಗಾಯಕ ಸಿ.ಎಂ. ನರಸಿಂಹ ಮೂರ್ತಿ ಅವರು ವೀಕ್ಷಕರಿಗೆ ಗಾನಸುದೆ ಹರಿಸಿದರು.
ಚಾಮರಾಜನಗರ ಹಿರಿಯ ಮುಖಂಡ ವೆಂಕಟರಮಣ ಸ್ವಾಮಿ ಪಾಪು, ಜಾನಪದ ಗಾಯಕ ಸಿ.ಎಂ. ನರಸಿಂಹಮೂರ್ತಿ, ಹಿರಿಯ ಪತ್ರಕರ್ತ ವೀರಣ್ಣ, ಸಮಾಜ ಸೇವಕ ಸುರೇಶ್ ಗೌಡ, ಗಾಯಕ ರವಿ ಸಂತು, ಉರಗ ಸಂರಕ್ಷಕ ಸ್ನೇಕ್ ಶ್ಯಾಮ್ ಮತ್ತಿತರಿದ್ದರು.