ಎರಡು ದಿನ ಕಳೆದರೆ ಎಲ್ಲರೂ ಸುಮ್ಮನಾಗುತ್ತಾರೆ

ಪುಟ್ಟರಂಗಶೆಟ್ಟಿ
ಪುಟ್ಟರಂಗಶೆಟ್ಟಿ
Published on

ಹನೂರು: ರಾಜಕೀಯದಲ್ಲಿ ಮುನಿಸು ಎಂಬುದು ಸಾಮಾನ್ಯ. ಎರಡು ದಿನ ಕಳೆದರೆ ಎಲ್ಲರೂ ಸುಮ್ಮನಾಗುತ್ತಾರೆ ಎಂದು ಸಚಿವ ಪುಟ್ಟರಂಗಶೆಟ್ಟಿ ಹೇಳಿದರು.

ಹನೂರಿನಲ್ಲಿ ಶುಕ್ರವಾರ ಸಂಪುಟ ವಿಸ್ತರಣೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಮುನಿಸು ಎಂಬುದು ಸಾಮಾನ್ಯ. ಒಳ್ಳೆಯದ್ದು, ಕೆಟ್ಟದ್ದು ಇದ್ದೇ ಇರುತ್ತದೆ. ನನಗೂ ಸ್ಥಾನ ಸಿಗದಿದ್ದರೆ ಮುನಿಸಿಕೊಳ್ಳುತ್ತಿದ್ದೆ. ಬಳಿಕ ಸುಮ್ಮನಾಗುತ್ತಿದ್ದೆ. ಇದೇ ರೀತಿ ಇತರರು 2 ದಿನ ಬಿಟ್ಟು ಎಲ್ಲರೂ ಸುಮ್ಮನಾಗುತ್ತಾರೆ ಎಂದರು.
ಕಳೆದ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಜಿಲ್ಲೆ ಅಭಿವೃದ್ಧಿಯಾಗಬೇಕು ಎನ್ನುವ ಉದ್ದೇಶದಿಂದ ಹೆಚ್ಚಿನ ಅನುದಾನ ನೀಡಿದ್ದಾರೆ. ಇಲ್ಲಿ ಪಕ್ಷ ಮುಖ್ಯವಲ್ಲ ಅಭಿವೃದ್ಧಿ ಮುಖ್ಯ ಎಂದು ತಿಳಿಸಿದರು.
ಅರಣ್ಯದಲ್ಲಿ ಮೇವು ಸಿಗುತ್ತಿಲ್ಲ. ಹಾಗಾಗಿ ಕಾಡು ಪ್ರಾಣಿಗಳು ನಾಡಿನತ್ತ ಲಗ್ಗೆ ಇಡುತ್ತಿವೆ. ಇದರಿಂದ ಮಾನವ, ವನ್ಯಜೀವಿ ಸಂಘರ್ಷ ಏರ್ಪಟ್ಟಿದೆ. ಆನೆಗಳ ಹಾವಳಿಯನ್ನು ಬ್ಯಾರಿಕೇಡ್ ಅಳವಡಿಸುವ ಮೂಲಕ ತಪ್ಪಿಸಬಹುದು. ಆದರೆ ಹುಲಿ, ಚಿರತೆಯನ್ನು ತಡೆಗಟ್ಟಲು ಆಗುತ್ತಿಲ್ಲ. ಈ ಬಗ್ಗೆ ಸರ್ಕಾರದಿಂದ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net