ಶ್ರೀ ವಾಸವಿ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ

ವಿದ್ಯಾರ್ಥಿಗಳ ಪೋಟೋ
ವಿದ್ಯಾರ್ಥಿಗಳ ಪೋಟೋ
Published on
ಕೊಳ್ಳೇಗಾಲ: ಚಾಮರಾಜನಗರ ವಿಶ್ವ ವಿದ್ಯಾಲಯದ 2025-26ನೇ ಸಾಲಿನ ಅಂತಿಮ ಬಿ.ಕಾಂ 6ನೇ ಸೆಮಿಸ್ಟರ್‌ನ ಫಲಿತಾಂಶವು ಪ್ರಕಟ ಗೊಂಡಿದ್ದು, ಪಟ್ಟಣದ ಶ್ರೀ ವಾಸವಿ ಪ್ರಥಮ ದರ್ಜೆ ಕಾಲೇಜು ಶೇ.100ರಷ್ಟು ಫಲಿತಾಂಶ ಪಡೆದಿದೆ.
ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 48 ವಿದ್ಯಾರ್ಥಿಗಳೂ ತೇರ್ಗಡೆ ಹೊಂದಿದ್ದು, ಈ ಪೈಕಿ 41 ವಿದ್ಯಾ ರ್ಥಿಗಳು ಅತ್ಯುತ್ತಮ ಶ್ರೇಣಿ, 7 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಪುಷ್ಪಾ 700 ಅಂಕಗಳಿಗೆ 695 ಅಂಕ ಗಳಿಸಿ (99.3) ಕಾಲೇಜಿಗೆ ಪ್ರಥಮ ಸ್ಥಾನಗಳಿಸಿದ್ದು, 5 ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. ಎಲ್.ಶ್ವೇತಾಶ್ರೀ 690 ಅಂಕ ಗಳಿಸಿ (98.6) ದ್ವಿತೀಯ ಸ್ಥಾನ ಗಳಿಸಿದ್ದು, 5 ವಿಷಯಗಳಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ. ಅನಿಸಾ ಮೊಹಮದ್ದೀ 689 ಅಂಕ ಗಳಿಸಿ (98.4) ತೃತೀಯ ಸ್ಥಾನ ಗಳಿಸಿದ್ದು, 5 ವಿಷಯ ಗಳಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ.
ಎಎಫ್‌ಎಂ ವಿಷಯದಲ್ಲಿ 8, ಎಂಎ ವಿಷಯದಲ್ಲಿ 7, ಐಎಎಸ್-ಎರಡನೇ ವಿಷಯದಲ್ಲಿ 7, ಐಎಂ ವಿಷಯದಲ್ಲಿ 6, ಐಟಿ-ಎರಡನೇ ವಿಷಯದಲ್ಲಿ 2, ಐಟಿಆರ್‌ಎಸ್ ವಿಷಯದಲ್ಲಿ 1 ಮತ್ತು ಇಂಟರ್‌ಶಿಪ್ ವಿಷಯದಲ್ಲಿ 38 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶ್ರೀ ವಾಸವಿ ವಿದ್ಯಾ ಕೇಂದ್ರದ ಅಧ್ಯಕ್ಷ ಎ.ಡಿ. ಕುಮಾರ ಕೃಷ್ಣ, ಕಾರ್ಯದರ್ಶಿ ಡಾ.ಪಿ.ಜಿ.ಶ್ರೀಧರ್, ಸಹ ಕಾರ್ಯದರ್ಶಿ ನಾಗರಾಜು ಬಾಬು, ಖಜಾಂಚಿ ಸುಮಂತ್ ವಿ. ಅಚ್ಚಮ್ ಹಾಗೂ ಸಂಯೋಜಕಿ ಅನೀತಾ ಗಿರೀಶ್, ಪ್ರಾಂಶುಪಾಲ ಜೆ.ರವಿಕುಮಾರ್ ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net