ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ

ವೈ.ಆರ್. ಕೃತಿ
ವೈ.ಆರ್. ಕೃತಿ
Published on

ಪ್ರಮುಖ ಮುಖ್ಯಾಂಶಗಳು

  • ಪ್ರಸಕ್ತ ಪಿಯು ಫಲಿತಾಂಶದಲ್ಲಿ ಉತ್ತಮ ಅಂಕ
ಯಳಂದೂರು: ಪ್ರಸಕ್ತ ಸಾಲಿನ ಪಿಯುಸಿ ಫಲಿತಾಂಶದಲ್ಲಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸುವ ಮೂಲಕ ಸಾಧನೆಗೈದಿದ್ದಾರೆ.
ಪಟ್ಟಣದ ಕುಂಬಾರಗುಂಡಿ ನಿವಾಸಿ ವೈ.ಜಿ. ಶಿಲ್ಪಾ ಹಾಗೂ ವೈ.ಜಿ.ರಂಗನಾಥ್ ದಂಪತಿ ಮಗಳಾದ ವೈ.ಆರ್. ಕೃತಿ ಮೈಸೂರಿನ ಬಿಜಿಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ವಿಜ್ಞ್ಞಾನ ವಿಭಾಗದಲ್ಲಿ 584 ಅಂಕ ಗಳಿಸುವ ಮೂಲಕ ಶೇ.97.55 ರಷ್ಟು ಫಲಿತಾಂಶ ದಾಖಲಿಸಿದ್ದಾರೆ.
ಕನ್ನಡದಲ್ಲಿ 100 ಅಂಗ್ಲ ವಿಷಯದಲ್ಲಿ 96, ಭೌತಶಾಸ್ತ್ರದಲ್ಲಿ 96 ರಸಾಯನಶಾಸ್ತ್ರದಲ್ಲಿ 94, ಗಣಿತದಲ್ಲಿ 99 ಹಾಗೂ ಜೀವಶಾಸ್ತ್ರದಲ್ಲಿ 99 ಅಂಕಗಳಿಸುವ ಮೂಲಕ ಸಾಧನೆಗೈದಿದ್ದಾರೆ. ತಾಲೂಕಿನ ದುಗ್ಗಹಟ್ಟಿ ಗ್ರಾಮದ ಸೋಮಣ್ಣ ಹಾಗೂ ಗೀತಾ ದಂಪತಿ ಮಗಳಾದ ಎಸ್.ರೋಹಿಣಿ ಕೊಳ್ಳೇಗಾಲದ ವಾಸವಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 574 ಅಂಕಗಳಿಸಿ ಶೇ. 95.60ರಷ್ಟು ಫಲಿತಾಂಶ ಪಡೆದಿದ್ದಾರೆ. ಕನ್ನಡ 95, ಆಂಗ್ಲಭಾಷೆ 90, ಭೌತಶಾಸ್ತ್ರ 98, ರಸಾಯನಶಾಸ್ತ್ರ 93, ಗಣಿತ 100 ಹಾಗೂ ಜೀವಶಾಸ್ತ್ರದಲ್ಲಿ 98 ಅಂಕ ಗಳಿಸಿದ್ದಾರೆ.
ಪಟ್ಟಣದ ಯಳಂದೂರು ಜೆಎಎಸ್‌ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ, ತಾಲೂಕಿನ ಉಪ್ಪಿನಮೋಳೆ ಗ್ರಾಮದ ಬಿ. ರಾಜೇಶ್, ನೀಲಮ್ಮ ದಂಪತಿ ಪುತ್ರಿ ಆರ್. ಸಂಜನಾ ವಾಣಿಜ್ಯ ವಿಭಾಗದಲ್ಲಿ 529 ಅಂಕಗಳಿಸಿ ಶೇ. 88.17ರಷ್ಟು ಫಲಿತಾಂಶ ಪಡೆದಿದ್ದಾರೆ. ಕನ್ನಡದಲ್ಲಿ 93, ಆಂಗ್ಲ ಭಾಷೆ 78 ಅರ್ಥಶಾಸ್ತ್ರ 93, ಬಿಜಿನೆಸ್ ಸ್ಟಡೀಸ್‌ನಲ್ಲಿ 94 ಅಕೌಂಟ್ಸ್‌ನಲ್ಲಿ 80 ಹಾಗೂ ಕಂಪ್ಯೂಟರ್‌ನಲ್ಲಿ 91 ಅಂಕ ಗಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net