ಗೂಡ್ಸ್ ಆಟೋ ಪಲ್ಟಿ 13 ಜನರಿಗೆ ಗಾಯ

ಯಳಂದೂರು ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಗ್ಗೆ ಗೂಡ್ಸ್ ಆಟೋ ಚಾಲಕನ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದಿರುವುದು.
ಯಳಂದೂರು ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಗ್ಗೆ ಗೂಡ್ಸ್ ಆಟೋ ಚಾಲಕನ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದಿರುವುದು.
Published on
ಯಳಂದೂರು: ಪಟ್ಟಣದ ರಾಷ್ಟ್ರೀಯ ಹೆದ್ದಾರಿ 948 ರ ಬೈಪಾಸ್ ರಸ್ತೆಯಲ್ಲಿ ಭಾನುವಾರ ಬೆಳಗ್ಗೆ
ಗೂಡ್ಸ್ ಆಟೋ ಪಲ್ಟಿ ಹೊಡೆದು 13 ಜನ ಗಾಯಗೊಂಡಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದವರು ಚಿಕ್ಕಲ್ಲೂರು ದೇಗುಲಕ್ಕೆ ತೆರಳುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. ಬೈಪಾಸ್ ರಸ್ತೆಯಲ್ಲಿ ಇವರು ಗೂಡ್ಸ್ ಆಟೋದಲ್ಲಿ ತೆರಳುತ್ತಿದ್ದ ವೇಳೆ ಹೊನ್ನೂರು ಗ್ರಾಮದಿಂದ ಬಂದ ವಾಹನವನ್ನು ಹಿಂದಿಕ್ಕಲು ವೇಗದ ಚಾಲನೆ ಮಾಡಿದ್ದರಿಂದ ಆಟೋ ಆಯತಪ್ಪಿ ಕೆಳಕ್ಕೆ ಬಿದ್ದಿದೆ. ಆಟೋದಲ್ಲಿದ್ದ ಜ್ಯೋತಿ, ತುಳಸಮ್ಮ, ಮಣಿ, ಲೋಕೇಶ್, ಪಾರ್ವತಮ್ಮ, ತಾಯಮ್ಮ, ರತ್ನಮ್ಮ, ಶೈಲಾ, ಕುಮಾರ್, ನಂಜುಂಡೆಗೌಡ, ಮಾದೇಗೌಡ , ರತ್ನಮ್ಮ ಗಾಯಗೊಂಡಿದ್ದು, ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ವಹಿಸಲಾಗಿದೆ.
ರಸ್ತೆ ಉಬ್ಬು ನಿರ್ಮಿಸಿ:
ಈ ಸ್ಥಳದಲ್ಲಿ ಅಪಘಾತಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. ಇದು ಬೈಪಾಸ್ ರಸ್ತೆ ಹಾಗೂ ಯಳಂದೂರು ಪಟ್ಟಣ, ಹೊನ್ನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಹಾಗಾಗಿ ಇಲ್ಲಿ ವಾಹನ ದಟ್ಟಣೆ ಅಧಿಕವಾಗಿರುತ್ತದೆ. ಇಲ್ಲಿಗೆ ರಸ್ತೆ ಉಬ್ಬು ನಿರ್ಮಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸುತ್ತಿವೆ. ಕೂಡಲೇ ಇಲ್ಲಿಗೆ ರಸ್ತೆ ಉಬ್ಬು ನಿರ್ಮಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾಋಎ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net