ಕರಡು ಮತದಾರರ ಪಟ್ಟಿ ಆಕ್ಷೇಪಣೆ ಅರ್ಜಿ ಸ್ವೀಕಾರ

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಸಲ್ಲಿಕೆಯಾಗಿರುವ ಹಕ್ಕು ಆಕ್ಷೇಪಣೆಗಳ ಸಂಬಂಧ ನಡೆದ ರಾಷ್ಟ್ರೀಯ ಮತ್ತು ರಾಜಕೀಯ ಪಕ್ಷಗಳ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳು ಈ ವಿವರ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಸಲ್ಲಿಕೆಯಾಗಿರುವ ಹಕ್ಕು ಆಕ್ಷೇಪಣೆಗಳ ಸಂಬಂಧ ನಡೆದ ರಾಷ್ಟ್ರೀಯ ಮತ್ತು ರಾಜಕೀಯ ಪಕ್ಷಗಳ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳು ಈ ವಿವರ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಆಗಸ್ಟ್ 24 ರಿಂದ 31ರವರೆಗೆ ಒಟ್ಟು 1496 ಹಕ್ಕು ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿದೆ
  • ಎಡಿಸಿ ಜವರೇಗೌಡ ಅಧ್ಯಕ್ಷತೆಯಲ್ಲಿ ಸಭೆ
ಚಾಮರಾಜನಗರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಪ್ರಕಟಿಸಿರುವ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಆಗಸ್ಟ್ 24 ರಿಂದ 31ರವರೆಗೆ ಒಟ್ಟು 1496 ಹಕ್ಕು ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಸಲ್ಲಿಕೆಯಾಗಿರುವ ಹಕ್ಕು ಆಕ್ಷೇಪಣೆಗಳ ಸಂಬಂಧ ನಡೆದ ರಾಷ್ಟ್ರೀಯ ಮತ್ತು ರಾಜಕೀಯ ಪಕ್ಷಗಳ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳು ಈ ವಿವರ ನೀಡಿದರು.
ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ನಮೂನೆ 6ರಲ್ಲಿ (ನಮೂನೆ-9) ಒಟ್ಟು 494 ಅರ್ಜಿಗಳು, ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು ಕೋರಿ ನಮೂನೆ 7ರಲ್ಲಿ (ನಮೂನೆ-10) 24, ಎಪಿಕ್ ಕಾರ್ಡ್ ಬದಲಾವಣೆ, ತಿದ್ದುಪಡಿ, ಅಂಗವಿಕಲರ ಗುರುತಿಸುವಿಕೆಗಾಗಿ ನಮೂನೆ 8ರಲ್ಲಿ (ನಮೂನೆ-11) 946, ಸ್ಥಳಾಂತರ, ವಿಧಾನಸಭಾ ಕ್ಷೇತ್ರದೊಳಗೆ ವಿಳಾಸ ಬದಲಾವಣೆಗಾಗಿ ನಮೂನೆ 8ರಲ್ಲಿ (ನಮೂನೆ-11ಎ) 26 ಅರ್ಜಿಗಳು, ಸ್ಥಳಾಂತರ ವಿಧಾನಸಭಾ ಕ್ಷೇತ್ರದ ಹೊರಗೆ ವಿಳಾಸ ಬದಲಾವಣೆಗಾಗಿ ನಮೂನೆ 8ರಲ್ಲಿ (ನಮೂನೆ-11ಬಿ) 6 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಒಟ್ಟಾರೆ 1496 ಅರ್ಜಿಗಳು ಸ್ವೀಕೃತವಾಗಿವೆ ಎಂದರು.
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ನಮೂನೆ 6ರಲ್ಲಿ (ನಮೂನೆ-9) ಒಟ್ಟು 138 ಅರ್ಜಿಗಳು, ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು ಕೋರಿ ನಮೂನೆ 7ರಲ್ಲಿ (ನಮೂನೆ-10) 6, ಎಪಿಕ್ ಕಾರ್ಡ್ ಬದಲಾವಣೆ, ತಿದ್ದುಪಡಿ, ಅಂಗವಿಕಲರ ಗುರುತಿಸುವಿಕೆಗಾಗಿ ನಮೂನೆ 8ರಲ್ಲಿ (ನಮೂನೆ-11) 215, ಸ್ಥಳಾಂತರ, ವಿಧಾನಸಭಾ ಕ್ಷೇತ್ರದೊಳಗೆ ವಿಳಾಸ ಬದಾಲಾವಣೆಗಾಗಿ ನಮೂನೆ 8ರಲ್ಲಿ (ನಮೂನೆ-11ಎ) 7 ಅರ್ಜಿಗಳು, ಸ್ಥಳಾಂತರ ವಿಧಾನಸಭಾ ಕ್ಷೇತ್ರದ ಹೊರಗೆ ವಿಳಾಸ ಬದಲಾವಣೆಗಾಗಿ ನಮೂನೆ 8ರಲ್ಲಿ (ನಮೂನೆ-11ಬಿ) 2 ಅರ್ಜಿಗಳು ಸೇರಿದಂತೆ ಒಟ್ಟಾರೆ 368 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದರು.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ನಮೂನೆ 6ರಲ್ಲಿ (ನಮೂನೆ-9) ಒಟ್ಟು 113 ಅರ್ಜಿಗಳು, ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು ಕೋರಿ ನಮೂನೆ 7ರಲ್ಲಿ (ನಮೂನೆ-10) 6, ಎಪಿಕ್ ಕಾರ್ಡ್ ಬದಲಾವಣೆ, ತಿದ್ದುಪಡಿ, ಅಂಗವಿಕಲರ ಗುರುತಿಸುವಿಕೆಗಾಗಿ ನಮೂನೆ 8ರಲ್ಲಿ (ನಮೂನೆ-11) 277, ಸ್ಥಳಾಂತರ, ವಿಧಾನಸಭಾ ಕ್ಷೇತ್ರದೊಳಗೆ ವಿಳಾಸ ಬದಾಲಾವಣೆಗಾಗಿ ನಮೂನೆ 8ರಲ್ಲಿ (ನಮೂನೆ-11ಎ) 5 ಅರ್ಜಿಗಳು, ಸ್ಥಳಾಂತರ ವಿಧಾನಸಭಾ ಕ್ಷೇತ್ರದ ಹೊರಗೆ ವಿಳಾಸ ಬದಲಾವಣೆಗಾಗಿ ನಮೂನೆ 8ರಲ್ಲಿ (ನಮೂನೆ-11ಬಿ) 4 ಅರ್ಜಿಗಳು ಸೇರಿದಂತೆ ಒಟ್ಟಾರೆ 405 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದರು.
ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ನಮೂನೆ 6ರಲ್ಲಿ (ನಮೂನೆ-9) ಒಟ್ಟು 100 ಅರ್ಜಿಗಳು, ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು ಕೋರಿ ನಮೂನೆ 7ರಲ್ಲಿ (ನಮೂನೆ-10) 10,ಎಪಿಕ್ ಕಾರ್ಡ್ ಬದಲಾವಣೆ, ತಿದ್ದುಪಡಿ, ಅಂಗವಿಕಲರ ಗುರುತಿಸುವಿಕೆಗಾಗಿ ನಮೂನೆ 8ರಲ್ಲಿ (ನಮೂನೆ-11) 201, ಸ್ಥಳಾಂತರ, ವಿಧಾನಸಭಾ ಕ್ಷೇತ್ರದೊಳಗೆ ವಿಳಾಸ ಬದಾಲಾವಣೆಗಾಗಿ ನಮೂನೆ 8ರಲ್ಲಿ (ನಮೂನೆ-11ಎ) 10 ಅರ್ಜಿಗಳು ಸೇರಿದಂತೆ ಒಟ್ಟಾರೆ 321 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ವಿವರಿಸಿದರು.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ನಮೂನೆ 6ರಲ್ಲಿ (ನಮೂನೆ-9) ಒಟ್ಟು 143 ಅರ್ಜಿಗಳು, ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು ಕೋರಿ ನಮೂನೆ 7ರಲ್ಲಿ (ನಮೂನೆ-10) 2, ಎಪಿಕ್ ಕಾರ್ಡ್ ಬದಲಾವಣೆ, ತಿದ್ದುಪಡಿ, ಅಂಗವಿಕಲರ ಗುರುತಿಸುವಿಕೆಗಾಗಿ ನಮೂನೆ 8ರಲ್ಲಿ (ನಮೂನೆ-11) 253, ಸ್ಥಳಾಂತರ, ವಿಧಾನಸಭಾ ಕ್ಷೇತ್ರದೊಳಗೆ ವಿಳಾಸ ಬದಾಲಾವಣೆಗಾಗಿ ನಮೂನೆ 8ರಲ್ಲಿ (ನಮೂನೆ-11ಎ) 4 ಅರ್ಜಿಗಳು ಸೇರಿದಂತೆ ಒಟ್ಟಾರೆ 402 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಸಭೆಗೆ ಮಾಹಿತಿ ನೀಡಿದರು.
ಇದೇ ವೇಳೆ ವಿವರಗಳುಳ್ಳ ಮಾಹಿತಿಯನ್ನೊಳಗೊಂಡ ಪ್ರತಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿಗಳು ನೀಡಿದರು.
ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಕೆ. ಹರೀಶ್, ಎನ್. ನಾಗಯ್ಯ, ಎ.ಹೆಚ್. ನಸ್ರುಲ್ಲಾ ಖಾನ್, ಸಯ್ಯದ್ ಅಕ್ರಂ, ಮಹೇಶ್. ಪಿ.ಎಂ, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net