

ಪ್ರಮುಖ ಮುಖ್ಯಾಂಶಗಳು
"ಚಾಮರಾಜನಗರದ ಸೋಮವಾರಪೇಟೆಯಲ್ಲಿ ಏರ್ ಟು ವಾಟರ್ ಪ್ಲಾಂಟ್‌ನ ಮೊದಲ ಪ್ರಾಯೋಗಿಕ ಮಾದರಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಬೇರೆ ಕಡೆಗಳಲ್ಲೂ ಈ ಪ್ಲಾಂಟ್‌ಗಳನ್ನು ಅಳವಡಿಸಬೇಕೆಂಬ ಚಿಂತನೆ ಇದೆ.
ಮೊದಲಿಗೆ ಗಾಳಿಯಿಂದ ನೀರು ಉತ್ಪಾದಿಸುವ ತಂತ್ರಜ್ಞಾನದ ಬಗ್ಗೆ ತಿಳಿದು ಅಚ್ಚರಿಯಾಯಿತು. ನಮ್ಮ ಶಾಲೆಯಲ್ಲಿ ಅಳವಡಿಸಿರುವ ಪ್ಲಾಂಟ್ ನೋಡಲು ಅಧಿಕಾರಿಗಳು, ಜನರು ಬರುತ್ತಿರುತ್ತಾರೆ. ಪ್ಲಾಂಟ್ ಹಾಕುವ ಮೊದಲು ನಾವು ಮನೆಯಿಂದಲೇ ನೀರು ತರುತ್ತಿದ್ದೆವು. ಈಗ ಇಲ್ಲೇ ಶುದ್ಧವಾದ ನೀರನ್ನು ಕುಡಿಯುತ್ತಿದ್ದೇವೆ.