ಚಾಮರಾಜನಗರ: ಜಿಲ್ಲೆಯ ಎರಡು ಪ್ರಮುಖ ಕಾಡುಗಳಲ್ಲಿ ಬೇಟೆಗಾರಿಕೆ ಸದ್ದಿಲ್ಲದೆ ಸಕ್ರಿಯವಾಗಿ ಚಟುವಟಿಕೆ ನಡೆಸಲು ಪ್ರಯತ್ನ ನಡೆಸುತ್ತಿವೆ. ಭಾಗಶಃ ಅರಣ್ಯ ಪ್ರದೇಶದಿಂದ ಕೂಡಿರುವ ಜಿಲ್ಲೆ ಚಾಮರಾಜನಗರ. ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಕೊಂಡಿಯಾಗಿರುವ ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ, ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಿರುವ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ನಡೆದಿರುವ ಪ್ರಮುಖ ಘಟನಾವಳಿಗಳು ಬೇಟೆಗಾರಿಕೆ ಸಕ್ರಿಯವಾಗಿರಬಹುದೆಂಬ ಅನುಮಾನಗಳಿಗೆ ಪುಷ್ಟಿ ನೀಡಿವೆ.