ಹಬ್ಬದ ದಿನವೂ ಕುಡಿಯುವ ನೀರಿಗಾಗಿ ಪರದಾಟ

 ಚಾಮರಾಜನಗರದ ರಾಮಸಮುದ್ರ ಬಡಾವಣೆಯ 31ನೇ ವಾರ್ಡ್ ನಿವಾಸಿಗಳು ಕುಡಿಯುವ ನೀರಿಗಾಗಿ ಗುರುವಾರ ಪ್ರತಿಭಟನೆ ನಡೆಸಿದರು. ಗುರುಸಿದ್ದಯ್ಯ, ರಾಜೇಶ್ವರಿ, ಮಾದಮ್ಮ, ಕಮಲಮ್ಮ, ತೊಳಸಮ್ಮ, ಕವಿತಾ, ರೋಜಾ, ಪಾರ್ವತಮ್ಮ, ಆಟೋ ಗುರುಸಿದ್ದ ಇನ್ನಿತರರಿದ್ದರು.
ಚಾಮರಾಜನಗರದ ರಾಮಸಮುದ್ರ ಬಡಾವಣೆಯ 31ನೇ ವಾರ್ಡ್ ನಿವಾಸಿಗಳು ಕುಡಿಯುವ ನೀರಿಗಾಗಿ ಗುರುವಾರ ಪ್ರತಿಭಟನೆ ನಡೆಸಿದರು. ಗುರುಸಿದ್ದಯ್ಯ, ರಾಜೇಶ್ವರಿ, ಮಾದಮ್ಮ, ಕಮಲಮ್ಮ, ತೊಳಸಮ್ಮ, ಕವಿತಾ, ರೋಜಾ, ಪಾರ್ವತಮ್ಮ, ಆಟೋ ಗುರುಸಿದ್ದ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಮಸಮುದ್ರ ಬಡಾವಣೆ ನಿವಾಸಿಗಳಿಂದ ಪ್ರತಿಭಟನೆ
  • 31ನೇ ವಾರ್ಡ್‌ನ ನಿವಾಸಿಗಳ ಧರಣಿ
ಚಾಮರಾಜನಗರ: ಸಾಮಾನ್ಯ ದಿನಗಳಿರಲಿ, ಮಕರ ಸಂಕ್ರಾಂತಿ ಹಬ್ಬದ ದಿನವೂ ಕುಡಿಯುವ ನೀರಿಗೆ ತೊಂದರೆ ಉಂಟಾಗಿರುವ ಹಿನ್ನೆಲೆಯಲ್ಲಿ ನಗರದ ರಾಮಸಮುದ್ರ ಬಡಾವಣೆಯ ನಿವಾಸಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ನಗರಸಭೆ ವ್ಯಾಪ್ತಿಯ 31ನೇ ವಾರ್ಡ್‌ನ ನಿವಾಸಿಗಳು ಬಡಾವಣೆಯ ನೀರಿನ ತೊಂಬೆ ಮುಂಭಾಗ ಜಮಾಯಿಸಿ ಕೆಲಕಾಲ ಪ್ರತಿಭಟನೆ ನಡೆಸಿದರು. ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಿವಾಸಿ ಗುರುಸಿದ್ದಯ್ಯ ಮಾತನಾಡಿ, ನಮ್ಮ ಬಡಾವಣೆಯಲ್ಲಿ ಒಂದು ಬೋರ್‌ವೆಲ್ ಇದ್ದು, ಅದು ನಾಲ್ಕೂ ದಿನಗಳ ಹಿಂದೆ ಕೆಟ್ಟು ಹೋಗಿದೆ. ಕಾವೇರಿ ನೀರನ್ನು ವಾರಕ್ಕೊಮ್ಮೆ ಮಾತ್ರ ಬಿಡುತ್ತಿದ್ದು, ನೀರಿಗೆ ಹಾಹಾಕಾರ ಉಂಟಾಗಿದೆ. ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರೀಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಗರಸಭೆ ಅಧಿಕಾರಿಗಳಿಗೆ ಈಗಾಗಲೇ ಮನವಿ ಮಾಡಿದ್ದು, ಬೋರ್‌ವೆಲ್ ರಿಪೇರಿ ಮಾಡಲು ಒಂದು ವಾರ ಕಾಲಾವಕಾಶ ಕೇಳಿದ್ದಾರೆ. ಈಗ ಹಬ್ಬದ ದಿನವೇ ನೀರು ಇಲ್ಲದೇ ನಿವಾಸಿಗಳು ತುಂಬಾ ಸಮಸ್ಯೆ ಅನುಭವಿಸುವಂತಾಗಿದೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಬಡಾವಣೆಗೆ ಅಗತ್ಯ ನೀರು ಪೂರೈಕೆ ಮಾಡಬೇಕು. ಇಲ್ಲವಾದರೇ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರಾಜೇಶ್ವರಿ, ಮಾದಮ್ಮ, ಕಮಲಮ್ಮ, ತೊಳಸಮ್ಮ, ಕವಿತಾ, ರೋಜಾ, ಪಾರ್ವತಮ್ಮ, ಆಟೋ ಗುರುಸಿದ್ದ, ಚೇತನ್, ಕೇಶವ ಹಾಗೂ ಇತರರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net