ಅಷ್ಟಾಂಗ ಮಾರ್ಗದಿಂದ ಶಾಂತಿಯುತ ಜೀವನ ಸಾಧ್ಯ

ಹನೂರಿನಲ್ಲಿ ತಾಲೂಕು ಆಡಳಿತದ ವತಿಯಿಂದ ಬುದ್ಧ ಪೂರ್ಣಿಮೆ ಆಚರಿಸಲಾಯಿತು. ಕೆ.ಎನ್ ಚೈತ್ರಾ, ಮಾದೇಶ್, ಶಿವಕುಮಾರ್, ಮಲ್ಲೇಶ್, ಹೇಮಾ ಇತರರಿದ್ದರು.
ಹನೂರಿನಲ್ಲಿ ತಾಲೂಕು ಆಡಳಿತದ ವತಿಯಿಂದ ಬುದ್ಧ ಪೂರ್ಣಿಮೆ ಆಚರಿಸಲಾಯಿತು. ಕೆ.ಎನ್ ಚೈತ್ರಾ, ಮಾದೇಶ್, ಶಿವಕುಮಾರ್, ಮಲ್ಲೇಶ್, ಹೇಮಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಕೆ.ಎನ್ ಚೈತ್ರಾ ಅಭಿಪ್ರಾಯ
ಹನೂರು: ಗೌತಮ ಬುದ್ಧ ನೀಡಿರುವ ಅಷ್ಟಾಂಗ ಮಾರ್ಗವನ್ನು ಅನುಸರಿಸಿದರೆ ಶಾಂತಿಯುತ ಜೀವನವನ್ನು ರೂಪಿಸಿಕೊಳ್ಳಬಹುದು ಎಂದು ತಹಸೀಲ್ದಾರ್ ಕೆ.ಎನ್ ಚೈತ್ರಾ ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಬುದ್ಧ ಪೂರ್ಣಿಮೆಯಲ್ಲಿ ಗೌತಮ ಬುದ್ಧ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಬುದ್ಧ ಪೂರ್ಣಿಮೆ ಗೌತಮ ಬುದ್ಧನ ಜನನ, ಜ್ಞಾನೋದಯ ಹಾಗೂ ಮಹಾ ಪರಿನಿರ್ವಾಣ ಹೊಂದಿದ ಪವಿತ್ರ ದಿನವಾಗಿದೆ. ಶಾಂತಿ. ಅಹಿಂಸೆ, ಕರುಣೆ ಹಾಗೂ ಮಧ್ಯಮ ಮಾರ್ಗದ ಮಹತ್ವವನ್ನು ಸಾರುತ್ತದೆ. ಇದು ಆತ್ಮಾವಲೋಕನ, ಮಾನವನೊಳಗಿನ ಬೆಳಕನ್ನು ಜಾಗೃತಗೊಳಿಸುವ ಹಾಗೂ ಬೌದ್ಧ ಧರ್ಮದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ದಿನವಾಗಿದ್ದು, ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಶ್ಲಾಘಿಸಿದರು. ಗೌತಮ ಬುದ್ಧ ಆಸೆಯೇ ದುಃಖಕ್ಕೆ ಮೂಲ ಕಾರಣ. ಅಷ್ಟಾಂಗ ಮಾರ್ಗವನ್ನು ಅನುಸರಿಸುವಂತೆ ಸಂದೇಶ ನೀಡಿದರು. ಬೌದ್ಧ ಧರ್ಮ ಭಾರತದಲ್ಲಿ ಮಾತ್ರವಲ್ಲದೇ ಇತರೆ ದೇಶಗಳಲ್ಲೂ ಪ್ರಚಲಿತದಲ್ಲಿದೆ. ಆದ್ದರಿಂದ ಇವರ ತತ್ವಗಳನ್ನು ಒಂದೇ ಧರ್ಮಕ್ಕೆ ಸೀಮಿತಗೊಳಿಸದೇ ಎಲ್ಲರೂ ಅನುಸರಿಸುವಂತಾಗಬೇಕು ಎಂದು ತಿಳಿಸಿದರು.
ಶಿರಸ್ತೆದಾರ್ ಮಾದೇಶ್, ಆರ್‌ಐಗಳಾದ ಶಿವಕುಮಾರ್, ಮಲ್ಲೇಶ್, ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್, ಗ್ರಾಮ ಆಡಳಿತಾಧಿಕಾರಿಗಳಾದ ಹೇಮಾ, ವಿನೋದ್, ಲೋಕೇಶ್, ಕಚೇರಿ ಸಿಬ್ಬಂದಿ ಶ್ರೀಧರ್, ಸಿದ್ದರಾಜು, ಶೇಖರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net